ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ನನ್ನ ಬಗ್ಗೆ


       ನಾನು  ದಿಲೀಪ್ ಕುಮಾರ್ ಶೆಟ್ಟಿ, ಸಿಕ್ಕಾಪಟ್ಟೆ ಒಳ್ಳೆ ಹುಡ್ಗ. ಬೇಕಿದ್ರೆ ನಮ್ಮೂರಿಗ್ ಬಂದು ನನ್ನ ಹೆಸ್ರು ಹೇಳಿ ನೋಡಿ. ಅಂದ ಹಾಗೆ ನಮ್ಮೂರು ಕಡಲ ತೀರದಲ್ಲಿರೋ ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಗುಳ್ಳಾಡಿ. ಹುಟ್ಟು ಪರಿಸರ, ಹವ್ಯಾಸ ಎಲ್ಲಾ ಸೇರಿ ಇಂದು ಕವಿತೆ-ಗಿವಿತೆ ಬರೆದು ನಿಮ್ಮ ತಲೆಗೆ ಕೆಲಸ ಕೊಡೊ ಕೆಲಸ ಮಾಡ್ತಿದೀನಿ. ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಪ್ರವೃತ್ತಿ ಗೀಚುವುದು.  ಪ್ರಸ್ತುತ ಕುಂದಾಪ್ರ ಡಾಟ್ ಕಾಮ್ ನಲ್ಲಿ ಕಥೆ-ಕವಿತೆಗಳ ಒಡ್ಡೋಲಗ ಎನ್ನುವ ಅಂಕಣವನ್ನು ಬರೆಯುತ್ತಿದ್ದೇನೆ. ನನ್ನೆಲ್ಲ ಕಥೆ ಕವನಗಳು ಈ ಬ್ಲಾಗಿನಲ್ಲಿ ಹಾಗು ಅಂಕಣದಲ್ಲಿ ಪ್ರಕಟಗೊಂಡಿವೆ. ಓದಿ, ಚೆನ್ನಾಗಿದ್ರೆ ಒಂದ್ ಕಾಮೆಂಟ್ ಬಿಸಾಕಿ, ಚೆನ್ನಾಗಿಲ್ದಿದ್ರೆ ಹೋಗ್ಲಿ ಬಿಡಿ ಇನ್ನೊಂದ್ ಬರಿತೀನಿ ಓದಿ. ನೀವು ಓದಿ ಮೆಚ್ಚಿದರೆ ಅಷ್ಟೇ ಸಾಕು. ನಿಮ್ಮ ಹರಕೆ, ಹಾರೈಕೆ, ಆಶೀರ್ವಾದ ಹೀಗೆ ಇರಲಿ. 

ನನ್ನನ್ನು ನೀವು ಇಲ್ಲಿ ಬೇಟಿ ಮಾಡಬಹುದು: ಫೇಸ್ಬುಕ್ ,ಟ್ವಿಟ್ಟರ್, ಕುಂದಾಪ್ರ ಡಾಟ್ ಕಾಮ್