
ಮೊಟ್ಟೆ ಹಾಕಿತು ಹೇಳದೆ,
ನೂಕಿ ಎಸೆದ ನಿನ್ನ ಬಿಂಬ
ಮತ್ತೆ ನೀಕುತಿದೆ ಕೇಳದೆ,
ಮೂಕ ಮನಸಿನ ಆರ್ತ ನಾದವು
ಮಾರ್ಗ ಮದ್ಯವೇ ಮರುಗಿದೆ.
ಮತ್ತೆ ಕಾಡುವ ಮಂದಿ
ಎದೆಯ ಗೋಡೆಯಲರಳಿ ಕಿಂಡಿ,
ತಪ್ಪಿ ಹೋಗಿದೆ ಕೊಂಡಿ,
ನೆನಪು ನೆಪವದು , ನಬದ ಮೀನು
ಹೋಗಲ್ ಹತ್ತಿರ ಹೊರಳುವುದೆತ್ತರ.
ಅಂತರದ ಆಂತರ್ಯ ರಾಜಿಯಾಗಲು ಒಪ್ಪಿ
ನೆನಪ ನೋವಿಗೆ ಬೀಗ ಮುದ್ರಿಸಿ
ಎದೆಯ ಅಂಗಳ ನುಣ್ಣನೊರಸಿ
ಕಾಯುತಿಹೆನು ಮತ್ತೆ ಬೇಟೆಗೆ
ಎದೆಯ ಬಗೆಯದೆ ಪ್ರೀತಿ ಹರಿಸುವವಳ
ಭೇಟಿಗೆ..
-ದಿಲೀಪ್ ಶೆಟ್ಟಿ
ಚಿತ್ರ ಕೃಪೆ : ಅಂತರ್ಜಾಲ