ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಸೋಮವಾರ, ಜುಲೈ 25, 2011

ನಿನ್ನ ನೆನಪಲಿ...

ನಿನ್ನ ನೆನಪಲಿ...

ಹಳೆಯ ಪೆಟ್ಟಿಗೆಯ ಸಂದಿಯಲಿ
ಹಳಸಿ ಹುಣ್ಣಾಗಿದ್ದ ಹೊತ್ತಿಗೆಯಲಿ
ನನ್ನವಳು ಬರೆದಿದ್ದ ನಲ್ನುಡಿಯ
ನಾಲ್ಕಕ್ಷರವ ನೋಡಿ ,
ಎದೆಯ ಸಂದಿಯಲಿ ನಲುಗಿ
ನೇತಾಡುತ್ತಿದ್ದ ಮದುರ ಪ್ರೇಮ,
ಮತ್ತೇ ಬುಸುಗುಟ್ಟಿತು..

ಬರುವ ಚೌತಿಯಂದು,
ಮರೆಯದೇ ಬರುವೆನೆಂದು
ಬರೆದ ಭಾರದ ಪುಟವ ಹಿಡಿದು
ಬರುವ ದಾರಿಯ ಬರಿದೆ ಕಾದೆನು.
ಬೆರೆವ ಬದುಕಿಗೆ ಬರೆಯ ಬರೆಸಿದೆ,
ಬದುಕ ಬರೆಸಿದ ಬದಿಗೆ ಒರಗಿದೆ.

ಕಡಲ ಮೀನಿಗೆ ಕೊಡದ ನೀರನು
ಕೊಡದೇ ಕಾಯಿಸಿ,
ಕೊಡಲಿ ಕಾವನು ಮತ್ತೆ ಕಾಯಿಸಿ
ಕೊಡುಗೆ ಕೊಡುವ ಪರಿಯಲಿ,
ನಿನ್ನ ನೆನಪಲಿ ಬೆಂದ ಜೀವಕೆ, 
ನೊಂದ ಪುಟದಲಿ ಬಂದ ಭಾವವೂ,
ಎಂದೂ ಆಗದ ಆಘಾತವ ತಂದು
ತಿಂದು ಬಿಟ್ಟಿತು ಮನವನು.

ಮರೆತು ಹೋಗಿಹ ಮಡಿದ ನೆನಪದು
ಮತ್ತೆ ಮಿಡುಕಿತು,ಮುತ್ತಿ ಮರುಗಿತು.
ಒದ್ದೆ ಮಾಡಿದ ಕಣ್ಣ ರಂದ್ರದಿ
ಎದ್ದು ಬಂದಿತು , ಸದ್ದು ಮಾಡಿತು.

ನನ್ನ ನೆನ್ನೆಯ ತುಂಬ
ನಿoದೇ ಬಿಂಬವು ನೋಡು.
ನಿನ್ನ ನಾಳೆಯ ಒಳಗೆ
ನನ್ನೇ ಕಳೆದಿಹೆ ನೀನು
ಇಂದು ನೆನಪಿಸಿ ನಾನು
ನಿನ್ನ ಪಡೆಯುವೆನೇನು?
ಹೆಣ್ಣೇ, ಹುಣ್ಣ ಮಾಡದಿರು. 
ಮನಸ ಮನಸಿಗೆ ಮುನಿಸು 
ಮಾಡಿರೆ, ಮಸಣ ಸೇರುವುದು
"ಮನಸ್ಸು".
  -ದಿಲೀಪ್ ಶೆಟ್ಟಿ.
2 ಕಾಮೆಂಟ್‌ಗಳು:

 1. ಕನ್ನೆಯ ಕಣ್ಣೋಟದ ಕಸುವು ಕಾಣಲು
  ಕಾಲವು ಕೈ ಮೀರಿ ಕೈ ತಪ್ಪಿ ಕಾಲ್ಕಿತ್ತು
  ಹಳೆಯ ಮಧುರ ಕನಸುಗಳ ನೆನಪುಗಳೇ
  ಖುಶಿ ಕೊಡಲು ಮನಕೀಗ........
  ಹುಣ್ಣಾದರೂ ಸರಿ, ಹೃದಯಕೆ ಮುದವೀಗ................

  ಪ್ರತ್ಯುತ್ತರಅಳಿಸಿ
 2. HAWDU DELEEP RE, NANU EE NOVU ANUBHAVISIDDINI.,M NANGE JOB SETLE ELLA ANNO REASON LI LAST MOMENT LI NANN ESHTAD LIFE TAPPI HOITHU, EGA NANNA QUTION YENEDRE, ENNU NANU LIFE SETLE MADKONDRU YENU USE,AA PREETHINA MARALI PADIYOK AGATADA? AND BERE WORK GE SEROKU GUILT AGATADE
  NIVENATHIRI?

  ಪ್ರತ್ಯುತ್ತರಅಳಿಸಿ