ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಶುಕ್ರವಾರ, ಫೆಬ್ರವರಿ 24, 2012

ಮಸಣದ ಹೂವು??


ಲಜ್ಜೆ ಜಾರಿದ ಮನ,ರಾತ್ರಿ ಜಾತ್ರೆಗೆ ಮಾನ,
ನಿತ್ಯ ಜಾಗರಣೆಯ ಕಾನನ,
ರಾತ್ರಿ ರಂಗಿನಲಿ ಕಾಮ ಕದನ,
ಜೀರುಂಡೆಗಳ ಜೇಂಕಾರಕ್ಕೆ ಸತ್ತ ವದನ.
ಮೂಸಿ ಎಸೆದ, ತುಸು ಮಾಸಿದ  ಹೆಣ್ಣು
ಮಸಣದ ಹೂವು??

ಮ್ಲಾನ ಮೌನದ ಒಡವೆ,
ಹಂಚಿ ಹರಿಯುವ ಹಿರಿಮೆ .
ಹರೆಯ ಹರಿದಿದೆ, ಹದವ ಅರಿತಿದೆ.
ದಾರಿಹೋಕರ ದಾಸೋಹಕ್ಕೆ,
ದಾಹ ತೀರದ ದಾರಿದ್ರ್ಯಕ್ಕೆ ,
ಬುಡ ಸತ್ತ, ಬಾಡಿದ ಹೆಣ್ಣು
ಮಸಣದ ಹೂವು??

ಮುಂಜಾವಿನಲಿ ಅಸ್ಪ್ರಷ್ಯೇ,
ಬೈಗುಳದ ಬಿಸಿ ತುಪ್ಪ.
ಸಂಜೆಯಾದರೆ ಅವಳೇ ನಿತ್ಯ ಶೀಲೆ,
ಹೊಗಳಿಕೆಯ ಬಿಗಿ ಕಪ್ಪ.
ಮಡಿವಂತಿಕೆಯ ಮುರುಕು ಮನಸಿಗರ
ನಂಬಿಕೆಯ ನಾಟಕದೊಕುಳಿಯಲಿ
ಜಾರಿದ ಸೆರಗು, ಸೋರುವ ಸೊಬಗು.
ರಸ ಹೀರಿ, ರಾಡಿ ಮಾಡಿ ಕಿತ್ತೋಗೆದ ಹೆಣ್ಣು 
ಮಸಣದ ಹೂವು??

-ದಿಲೀಪ್ ಶೆಟ್ಟಿ

ಚಿತ್ರ ಕೃಪೆ : ಅಂತರ್ಜಾಲ  

6 ಕಾಮೆಂಟ್‌ಗಳು:

  1. ದಿಲೀಪ್ ಶೆಟ್ರೇ
    ನಿಮ್ಮ ಕವನ ತುಂಬಾ ಚೆನ್ನಾಗಿದೆ. ಸಮಾಜದ ಗಂಭೀರ ವಿಷಯವನ್ನು ಎತ್ತಿಕೊಂಡು.
    ಶೈಲಿಯೂ ಚೆನ್ನಾಗಿದೆ
    ನಾಲ್ಕನೆಯ ಪಾರವಾಗಿ ನಿಮ್ಮ ಪರಿಹಾರವೂ ಇದ್ದರೆ ಚೆನ್ನಿತ್ತು

    ಪ್ರತ್ಯುತ್ತರಅಳಿಸಿ
  2. ಅವರ ಕಾಮಗೋರಿಯ ಮೇಲೆ ಅವಳು ಕೆಲವೊಮ್ಮೆ ಹೂವಾಗಬೇಕಾಗುತ್ತದೆ. ಅವಳಿಗದು ಮಸಣ. ಸುಡುತ್ತಿರುತ್ತದೆ ಅವಳ ದೇಹ. ಅವನಿಗದೋ ಸುಖದ ಸುಪ್ಪತ್ತಿಗೆ. ಹೀಗೆ ಇರಬಹುದೇನೋ ಸಂದರ್ಭಗಳು. ನಿಮ್ಮ ಯೋಚನಾಲಹರಿಯ ಭಾವದೊಳಗೆ ಮಸಣದ ಹೂವಿಗೊಂದು ಭಾವದ ಭಾಷ್ಯಬರೆದದ್ದು ಅಪೂರ್ವ ಪ್ರಯತ್ನ.

    ಪ್ರತ್ಯುತ್ತರಅಳಿಸಿ