ಹಲವು ಸಲ ಬಯಸಿದ್ದು
ಹೊಲದ ಕಳೆಗೂ ಕೀಳಾಗಿ,
ಹೊಳೆವ ನಿನ್ನದೇ ಬಿಂಬ
ಚಿತ್ತ ಪರದೆಯ ತುಂಬ
ಬಿತ್ತರಿಸಿದ ಭಾವ, ಬಂಗಿಯ
ನಡುವೆ ಬೆಂದ, ಭಾವನೆಗಳ
ಕಾರ್ಮುಗಿಲ ಕೆಸರಿನ ಹೋಳಿ
ಎರಚಿ,ನಗ್ನ ನರ್ತನವಾಡಿ
ಗಬ್ಬೆದ್ದ ಗುಂಡಿಗೆಯನು
ನಗುವ ಗುಂಡಿಗೆ ನೂಕಿ
ಹರಿದ ಹೃದಯಕೆ ಮತ್ತೆ
ಪತ್ತೆ ಪಟ್ಟಿಯ ಕಟ್ಟಿ
ಕೋಲ್ಮಿಂಚ ರಬಸದಿ ಕಣ್ಮರೆಯಾಗೊ
ನಿನಗೇನೆನ್ನಲೆ ಮೋಹಿನಿ??
-ದಿಲೀಪ್ ಶೆಟ್ಟಿ
(ಚಿತ್ರ ಕೃಪೆ: ಅಂತರ್ಜಾಲ )
(ಚಿತ್ರ ಕೃಪೆ: ಅಂತರ್ಜಾಲ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ