ನಮ್ಮೆದುರು ಕೆಮ್ಮುತಿರೆ,
ತಂಗಾಳಿಯ ಬೆನ್ನಟ್ಟಿ
ತೆಂಗು ಬಾಳೆ ಬಾಗುತಿರೆ,
ಅಂಬರವು ಅಂಬಿಗಗೆ
ಅಬ್ಬರದಿ ಬೊಬ್ಬಿಡುತಿರೆ,
ವಾರಧಿಗೆ ಮತ್ತು ಹೆಚ್ಚಿ
ವಾಲಾಡುತಿರೆ,
ವದ್ದೆ ವ್ರಕ್ಷಕೆ ಒರಗಿ
ಸಿಡಿಲ ಸದ್ದಿಗೆ ಹೆದರಿ ಒದ್ದಾಡುವಾಗ,
ನನ್ನೆದೆಗಪ್ಪಿ, ಏದುಸಿರು ಬಿಟ್ಟು
ಎದೆಯ ಭಾವ ಲಹರಿಯ ಜೊತೆ ಸೇರಿ,
ನೀ ಹಾಡ ಬಾರದಿತ್ತೆ ನನ್ನುಸಿರಿನ ಕವಿತೆ.
-ದಿಲೀಪ್ ಶೆಟ್ಟಿ.
(ಚಿತ್ರ ಕೃಪೆ: ಅಂತರ್ಜಾಲ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ