ಕತ್ತಲೊಳು ಚುಕ್ಕಿ ಚಂದ್ರಮರು,
ನಿತ್ಯ ನೀಡುವರು
ದಿವ್ಯ ದೀಪದ ಆವಳಿ.
ಇಷ್ಟು ಸಾಲದೆ, ಸಾಲು ಸಾಲಲಿ
ಚಿಮ್ಮಿ ಬಿಡುವರು ಗುಡು ಗುಡುಗು ಪಟಾಕಿಯ,
ಮತ್ತೆ ಮಿಂಚದು ಹೊಳೆದು ಹೋಗಲು
ಕತ್ತಲಾ.. ನಭ, ಬೆಳಗುವುದು.
ಮತ್ತೆ ಏತಕೆ ಹೊಲಸು ಮಾಡಿರಿ,
ಸುತ್ತ ಮುತ್ತಲ ಪರಿಸರ.
ಬೆಂಕಿ ಕೊಟ್ಟರೆ ಪಟಾಕಿಗದು
ಸುಟ್ಟು ಬಿಡುವುದು ಸರ ಸರ.
ಏನ ಉಳಿವುದು ನಿಮ್ಮ ನಾಳೆಗೆ,
ಸತ್ತು ನಾರದೆ ಪರಿಸರ ??
ಸುಜ್ಞಾನದ ದೀಪ ಹಚ್ಚಲು,
ಪ್ರಕೃತಿ ಮಾತೆಯು ಬೆಳಗಲಿ.
ಹಂಚಿ ಹರಡುವ ಸ್ನೇಹ, ಬಾಂದವ್ಯವ
ಗಿಡ, ಮರ ನಾಡಿಗೆ.
ದೀಪಾವಳಿ ದಾರಿ ತೋರಲಿ
ನಾಳೆ ಎಂಬೋ ನಾಳೆಗೆ.
-ದಿಲೀಪ್ ಶೆಟ್ಟಿ.
very nice dileep
ಪ್ರತ್ಯುತ್ತರಅಳಿಸಿvery nice dileep
ಪ್ರತ್ಯುತ್ತರಅಳಿಸಿ