ಕಟ್ಟಿ ಕೊಟ್ಟಿದ್ದೆ ಅವಳಿಗೆ
ಮನದ ಮಂದಿರದಲ್ಲೊಂದು ಮಾಳಿಗೆ.
ಮೆಟ್ಟಿ ಹೋದಳು ಧೂಳ ಪಾದದಿ, ಮತ್ತೆ
ಮೈಲಿಗೆಗೆ ಕಣ್ಬನಿಯು ಎದೆಯ ಅಮುಕಿತು.
ಪೌರುಷದ ಹುಸಿ ಸರ್ಪ ಪ್ರೀತಿಯಲಿ ಮುಳುಗಿತ್ತು.
ನನ್ನವಳ ಪುಂಗಿಗೆ ಬಂಗಿ ಭಾವವ ನೀಡಿ.
ಭಂಡ ಮನಸದು ಇನ್ನೂ ಪ್ರೀತಿ ಪಯಣಕೆ ಕಾದು,
ನೋವ ಬುಟ್ಟಿಯಲಿ ನಬಕೆ ಇಣುಕುತಲಿ,
ಪ್ರೀತಿ ಸೋನೆಗೆ ಕಾಯುತಿಹುದು.
ನಿನ್ನ ನೋಟಕೆ ಕಾಯ್ವ ನನ್ನ ಕಣ್ಗಳ ಕಿತ್ತು
ನೀನು ನಗುತಿರೆ ಎನಗೆ, ನಿತ್ಯ ಕಾಮನಬಿಲ್ಲು.
ಇಟ್ಟು ಕೊಳ್ಳಿಯ ಕೊನೆಗೆ ಓಡಿ ಹೋಗಲು ನೀನು
ಒಡೆದ ಮನದಲಿ ಚಿಗುರಿತು, ಅದುಮಿಟ್ಟ ನೋವು,
ಸುಟ್ಟ ಗಾಯದ ಸುತ್ತ, ಸತ್ತ ನೆನಪುಗಳ ಹುತ್ತ.
ಪ್ರೀತಿ ಮಾರುಕಟ್ಟೆಯಲಿ ಮನಸು ಮೂರಾಬಟ್ಟೆ.
-ದಿಲೀಪ್ ಶೆಟ್ಟಿ.
ಚಿತ್ರ ಕೃಪೆ: ಅಂತರ್ಜಾಲ
Superrrr chennagide:)
ಪ್ರತ್ಯುತ್ತರಅಳಿಸಿwhere u copied maga....:)
ಪ್ರತ್ಯುತ್ತರಅಳಿಸಿ