ಕಳ್ಳರೆಷ್ಟಿಹರು ನೋಡು ನಿನ್ನೊಳಗೆ
ಇಣುಕಿಣುಕೊ ಬಿನ್ನ ಭಾವದ ಮನಸೆ .
ಕಣ್ಣು ತಾ ತೆರೆದಿಟ್ಟು ಮತ್ತೆ ಮುಚ್ಚುವ ಮುನ್ನ
ಕದ್ದು ಓಡುವ ಹುಚ್ಚು. ಕಚ್ಚಿ ತಿನ್ನುವ ಕಿಚ್ಚು.
ಹಸಿ ಕಸಿ ಮನದ ಅರೆ ಬೆಂದ ಉಸಿರು.
ಸತ್ಯದ ಸತ್ವವು ಸತ್ತು, ತತ್ವದಾಚೆಗಿನ ಕಿರಿಕಿಂಡಿ ಕಮರುತಿರೆ,
ಕಳ್ಳಿ,ಕಳೆ ಕೊಳೆಯುತಿದೆ ಬಸಿರ ಬಾಣಲೆಯಲಿ.
ಬೆತ್ತಲ ಬಯಲಲಿ ಸುತ್ತಲು ತರುವು.
ನಿತ್ಯವೂ ಮಜ್ಜನ , 'ಬಂಡೆ'ದೆ ಶಿಲೆಗೆ.
ಭಕ್ತಿಯ ಬವಣೆಗೆ ಬತ್ತಲು ಮರುವು,
ಸುತ್ತಲು ಕಾಯ್ವರು ಬಕ್ತಿಯ ಫಲಕೆ.
ಫಲ ಕೊಟ್ಟು ಕಾಯುವ ಕಲ್ಪವೃಕ್ಷ,
ಮರುಗಿ ಮರೆಯಾಯ್ತು, ಹಿಡಿ ನೀರ ತೃಷೆಯಲಿ,
ಕಡು ಮೂಡರ ಬಕುತಿಯಲಿ.
ಮೌಡ್ಯತೆಯ ಮಾಣಿಕ್ಯ, ಮಾನವನ ಎದೆ ಹೊಕ್ಕಿ
ಮಾಸಿ ಹೋಗಿದೆ ಭವ,ಮಸಣವಾಗಿದೆ ಬದುಕು.
ಜ್ಞಾನದ ತಂಬೆಳಕ ಹಾಯಿಸು , ಸರಿ ದಾರಿ ತೋರಿಸು .
ಮತ್ತೆ ಪರ್ವದಲಿ ಮಾನವಿಯತೆಯ ಬೆಳೆಸು .
-ದಿಲೀಪ್ ಶೆಟ್ಟಿ
ಚಿತ್ರ ಕೃಪೆ :ಅಂತರ್ಜಾಲ
ಒಮ್ಮೆ ಇಣುಕಿ ನೋಡಿಕೊಂಡೆ ಎಲ್ಲೋ ಕೊರತೆಯಿದೆಯೆಂದೆನಿಸಿತು ನನ್ನೊಳಗೆ ನನಗೆ...!
ಪ್ರತ್ಯುತ್ತರಅಳಿಸಿಇನ್ನಷ್ಟು ಕೆದಕಬೇಕು ನನ್ನ ನಾ...! ಅಗೆದು ಹೊರತೆಗೆಯಬೇಕು!
"ಉತ್ಖನನ" ಚೆನ್ನಾಗಿದೆ!