ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಸೋಮವಾರ, ಜನವರಿ 9, 2012

ಕಾಯುತಿಹೆನು..

ಮೂಟೆ ಕಟ್ಟಿದ ನಿನ್ನ ನೆನಪು
ಮೊಟ್ಟೆ ಹಾಕಿತು ಹೇಳದೆ,
ನೂಕಿ ಎಸೆದ ನಿನ್ನ ಬಿಂಬ 
ಮತ್ತೆ ನೀಕುತಿದೆ ಕೇಳದೆ,
ಮೂಕ ಮನಸಿನ ಆರ್ತ ನಾದವು 
ಮಾರ್ಗ ಮದ್ಯವೇ ಮರುಗಿದೆ. 

ಮತ್ತೆ ಕಾಡುವ ಮಂದಿ 
ಎದೆಯ ಗೋಡೆಯಲರಳಿ ಕಿಂಡಿ,
ತಪ್ಪಿ ಹೋಗಿದೆ ಕೊಂಡಿ,
ನೆನಪು ನೆಪವದು , ನಬದ ಮೀನು 
ಹೋಗಲ್ ಹತ್ತಿರ ಹೊರಳುವುದೆತ್ತರ.

ಅಂತರದ ಆಂತರ್ಯ ರಾಜಿಯಾಗಲು ಒಪ್ಪಿ 
ನೆನಪ ನೋವಿಗೆ ಬೀಗ  ಮುದ್ರಿಸಿ 
ಎದೆಯ ಅಂಗಳ ನುಣ್ಣನೊರಸಿ 
ಕಾಯುತಿಹೆನು ಮತ್ತೆ ಬೇಟೆಗೆ 
ಎದೆಯ ಬಗೆಯದೆ ಪ್ರೀತಿ ಹರಿಸುವವಳ
ಭೇಟಿಗೆ.. 

-ದಿಲೀಪ್ ಶೆಟ್ಟಿ

ಚಿತ್ರ ಕೃಪೆ : ಅಂತರ್ಜಾಲ 

6 ಕಾಮೆಂಟ್‌ಗಳು:

  1. ಇದೆ ಫಸ್ಟ್ ಟೈಮ್ ನ ನಿಮ್ ಬ್ಲಾಗನ್ನ ನೋಡ್ತಾ ಇರೋದು..ಯಾಕೋ ಮೊದಲ ಕವನಾನೆ ತುಂಬಾ ಹಿಡಿಸ್ತು..ಆದಷ್ಟು ಬೇಗ ಎಲ್ಲದನ್ನು ಓದ್ತೀನಿ..ಬರವಣಿಗೆ ಮುಂದುವರೆಸಿ..ಶುಭಾಶಯಗಳು :)

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  3. ವಿರಹದ ನೋವನ್ನ ಕವಿ ಮಾತ್ರವಲ್ಲ...ಕವಿತೆಯಲ್ಲಿ ಓದುಗನು ಆಸ್ವಾದಿಸುತ್ತಾನೆ ಎಂಬುದಕ್ಕೆ ಈ ಕವಿತೆಯೇ ಸಾಕ್ಷಿ...ತುಂಬಾ ಚೆನ್ನಾಗಿ ಬರೆದ್ದಿದಿರಿ..

    ಪ್ರತ್ಯುತ್ತರಅಳಿಸಿ
  4. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  5. ಸೂಪರ್ ದಿಲೀಪ್ .....!!!! ನಿಮ್ಮ ಕವನಗಳು ಮನ ಮುಟ್ಟಿ ಹೃದಯವನು ತಟ್ಟು ವುದು ........

    ಪ್ರತ್ಯುತ್ತರಅಳಿಸಿ