ಜಗದ ಜೋಳಿಗೆಯಲಿ
ನಾ ಗುಲಾಮ.
ನನ್ನೋಡನಿರುವರು
ನನ್ನೆದೆ ಬಡಿವರು
ನಿನ್ನೆಯ ಕನವರಿಕೆಯಲಿ
ನಾಳೆಯ ಮಂಪರಿನಲಿ
ಇಂದಿದೆ ಎನ್ನುವುದ ಮರೆತರು
ಮನುಜರು.
ಪೂಜೆಯ ಕೊಟ್ಟರು ಹರಕೆಯ ಹೊತ್ತರು
ಬಾಯಿಯ ಬಿಲದೊಳು ಬಜನೆಯ ಬಿಗಿದರು
ಮೊನ್ನೆಯ ಪಾಪಕೆ ಇಂದಿದೆ ಸದ್ಗತಿ
ಎನ್ನುತ ಪಾಪವ ಮಾಡುತಲಿರುವರು
ನಾನೇನ ಮಾಡಲಯ್ಯ??
ಜಗದ ಜೋಳಿಗೆಯಲಿ
ನಾ ಗುಲಾಮ.
ಇದು ನೀ ಕಟ್ಟಿ ಕೊಟ್ಟ ಬುತ್ತಿ
ಹೊಟ್ಟೆ ತುಂಬಲು ಕೊರತೆ ಕಾಂಬುದು
ಕೊಟ್ಟು ತಿನ್ನಲು ಕಡಿಮೆಯಾಗುವುದು.
ಕಿತ್ತು ತಿನ್ನುವ ಜನರೇ ಎಲ್ಲರು
ಬೇಡಿ ಕೊಂಡರೆ ಬೆಲ್ಲ ಸಿಗುವುದೇ
ಕಾಯಕದಿ ಎಲ್ಲ ಇರುವುದು
ನೀನಾಡೊ ಆಟ , ಎಲ್ಲರ ಪರದಾಟ
ಜಗದ ಜೋಳಿಗೆಯಲಿ
ನಾ ಗುಲಾಮ
-ದಿಲೀಪ್ ಶೆಟ್ಟಿ