ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಗುರುವಾರ, ಮೇ 22, 2014

The ಮುಚ್ಕೊಳ್ಳೊ culture

(ವಿ.ಸೂ. : ಬೆಂಗಳೂರಿನ ಯುವಕರ ಹಿತದೃಷ್ಟಿಯಿಂದ ಬೆಂಗಳೂರಿಗರಿಗೊಂದು ವಿನಂತಿ.)

          “ ಪ್ರತಿಭಾ ಪಲಾಯನ ಈಗೊಂದು 4-5 ವರ್ಷಗಳಿಂದ ಬೆಂಗಳೂರು ಅನ್ನೊ ಮಹಾನಗರದಲ್ಲಿ ಅಸಂಖ್ಯಾತವಾಗಿದೆ. ರಾಜ್ಯದ ಪ್ರತಿಭೆಗಳು  ಇತರೆಡೆಗೆ ಚದುರಿಹೋಗುತ್ತಿದ್ದಾರೆ. ಅದರಲ್ಲೂ ಯುವಕರು ಬೆಂಗ್ಳೂರಿನ ಸಹವಾಸಾನೆ ಬ್ಯಾಡಪ್ಪ.. ಅನ್ನೋವಷ್ಟು ರೋಸಿ ಹೋಗಿದ್ದಾರೆ. ಯಾಕೆ ಹೀಗೆ .ಬೆಂಗಳೂರಲ್ಲಿ  ಆಗುತ್ತಿರುವ ಅಂತಹ ಬದಲಾವಣೆಗಳಾದರೂ ಏನು ? ಸ್ವಲ್ಪ ಕುಂತಲ್ಲೆ rewind ಮಾಡಿ, 5-6 ವರ್ಷ ಹಿಂದೆ ಸರಿಯಿರಿ. ಆಗ Fly oversಗಳು ಕಡಿಮೆ ಇದ್ದವು. ಮೆಟ್ರೊ ಕಾಮಗಾರಿ ಇರ್ಲಿಲ್ಲ. Traffic ಇಷ್ಟೊಂದು ದುಸ್ತರವಾಗಿರಲಿಲ್ಲ. ಮೋಟಾರು ದಟ್ಟಣೆ ಇರಲಿಲ್ಲ. Cost of leaving ಗೆ art of leaving ಕಲಿಯಲೇ ಬೇಕಾಗಿರಲಿಲ್ಲ. ಹಾಗಾಗಿ ಜೀವನವೂ ಸಸೂತ್ರವಾಗಿ ನಡಿತಿತ್ತು.  ಆದ್ರೆ ಈಗ, ಒಂದು ಖಾಯಿಲೆಗೆ ಔಷದಿ ತಗೊಳ್ಳೋಕೆ ಹೊರಗಡೆ ಹೋದ್ರೆ ಮತ್ತೆ ಮೂರು ಖಾಯಿಲೆ ಅಂಟಿಕೊಂಡಿರುತ್ತೆ. ಈ ತಾಪತ್ರೆ ಬೇಡ ಅಂದ್ಕೊಂಡು ಮನೆಯೊಳಗಡೆ ಇದ್ರೂ ಕಿಟಕಿ ತೆರೆಯೊ ಹಾಗಿಲ್ಲ. ಗಾಳಿ ಬರುತ್ತೋ ಇಲ್ಲವೋ ವಾಸನೆಧೂಳು ಮಾತ್ರ ಉಚಿತ. ಹೊರಗಡೆ ಹೋಗ್ಬೇಕು ಅಂದ್ರೆ ನವ-ರಂದ್ರಗಳಿಗೂ ತೇಪೆ ಹಾಕಿಕೊಳ್ಳಬೇಕು. ಹೀಗಿರೋವಾಗ ಯಾರಾದ್ರೂ ಇಲ್ಲಿ ಇರೋಕೆ ಇಷ್ಟ ಪಡ್ತಾರೆಯೇ??. ಇಷ್ಟೇ ಆಗಿದ್ದಿದ್ರೆ ನಮ್ಮ ಹುಡುಗ್ರು ಇಲ್ಲೇ ಇರ್ತಿದ್ರೆನೋಆದರೆ ನಗರಿಕರಣದ ಇನ್ನೊಂದು ದೊಡ್ಡ ಅಡ್ಡಪರಿಣಾಮದಿಂದಾಗಿ ನಮ್ಮ ಹುಡುಗ್ರು ಬೆಂಗಳೂರಿನ ಮೇಲಿರೊ ಭರವಸೆ, ಅಭಿಮಾನವನ್ನೆ ಕಳೆದುಕೊಂಡಿದ್ದಾರೆ. ಇಷ್ಟಕ್ಕೆಲ್ಲ ಕಾರಣ the ಮುಚ್ಕೊಳ್ಳೊ culture.

          ಆವಾಗೆಲ್ಲ ಹುಡುಗ್ರಿಗೆ mood ಹಾಳಾದ್ರೆ, mind fresh ಮಾಡ್ಕೊಳ್ಳೋಣ ಅಂತ ಅನ್ಸಿದ್ರೆ ಯೋಗಾಸನನೊ, ಪ್ರಾಣಾಯಾಮನೊ ಮಾಡ್ಬೇಕು ಅಂತೆನಿರ್ಲಿಲ್ಲ. ಹಾಗೆ ಒಂದು walk ಹೋದ್ರೆ ಸಾಕು. ಬಣ್ಣ-ಬಣ್ಣ ದ ಚಿಟ್ಟೆಗಳು ಹಾಗೆ ಕಣ್ಣಿಗೆ, ಮೂಗಿಗೆ ತಂಪಾದ ಗಾಳಿ ಹಾಕಿ, ತಣ್ಣಗಿಡುತ್ತಿತ್ತು. ಬಿರು-ಬಿಸಿಲಿನಲ್ಲೂ air-condition ನಲ್ಲಿ ಇದ್ದ ಹಾಗೆ ಇರ್ತಿತ್ತು. ಆದೆಷ್ಟೋ ಹುಡುಗರು ಈ ಬಣ್ಣ-ಬಣ್ಣ ಬಣ್ಣದ ಚಿಟ್ಟೆ ಗಳನ್ನ ನೋಡೊದಕ್ಕೆ ಅಂತಾನೆ ಬೆಂಗಳೂರಿಗೆ ಬರ್ತಿದ್ರು. ಹುಡುಗಿಯರೂ ಅಷ್ಟೇ, ತಾವು ಯಾರಿಗೂ ಕಮ್ಮಿ ಇಲ್ಲ ಅನ್ನೋ ರೀತಿ ತಮ್ಮ ಹಾವ,ಭಾವ, ಬಿಂಕ ಬಿಗುಮಾನಗಳಿಂದ, ಕಣ್ಸನ್ನೆಯಿಂದ, ಮಧು ತುಂಬಿದ ಮುಗುಳ್ನಗುವಿನಿಂದ ಹುಡುಗರ ಹೃದಯಕ್ಕೆ  ಕಣ್ಣು ಹೊಡಿತಿದ್ದರು, ಕನ್ನ ಹಾಕುತ್ತಿದ್ದರು. ಆದರೆ ಇಂದಿನ ಅಭಿವೃದ್ದಿಯ ಪತಕ್ಕೆ ಯುವಕರು ಬಲಿಯಾಗಿದ್ದಾರೆ. ಸಾವಿರಾರು ಆಸೆ ಹೊತ್ತು ಬೆಂಗಳೂರಿಗೆ ಬರುವ ಯುವಕರಿಗೆ ಮೋಸ ನಡೆಯುತ್ತಿದೆ. ಬೆಳವಣಿಗೆಯ ಸೋಗಿಗೆ, ಬೆಂಗಳೂರು ತೊಟ್ಟಿ ಗುಂಡಿಯಾಗಿದೆ. ಮುಖ ಮೂತಿ ಮುಚ್ಚಿಕೊಂಡೆ ಬೀದಿಗೆ ಇಳಿಯ ಬೇಕಾದ ಅನಿವಾರ್ಯತೆ ಎಲ್ಲರಿಗೂ ಇದೆ. ಕೇಶ ರಾಶಿಯನ್ನು ಅಲಂಕರಿಸಿ, ಮೋರೆಗಿಷ್ಟು ಬಣ್ಣ ಬಳಿದು, ಸೊಂಟ ಬಳುಕಿಸುತ್ತ ಹೋಗೊ ಹುಡಿಗಿಯರು ಇಂದು ಒಂದಿಂಚು ಮಾಂಸ ಕಾಣದಂತೆ air-tight pack ಮಾಡ್ಕೊಂಡು ಬೀದಿಗೆ ಇಳಿತಿದ್ದಾರೆ. ಹೀಗೆ ಅಡಿಯಿಂದ ಮುಡಿವರೆಗೂ ಬಿದಿರು ಬೊಂಬೆ ಹಾಗೆ ಬಟ್ಟೆ ಮುಚ್ಕೊಂಡು ರಸ್ತೆಗೆ ಇಳಿದರೆ ಪ್ರೀತಿ-ಪ್ರೇಮ ಅನ್ನೊ ಶಬ್ದಗಳು ಉಳಿಯುವುದಾದ್ರು ಹೇಗೆ?. ಪ್ರೀತಿ-ಪ್ರೇಮ ಹಾಳಾಗಿ ಹೋಗಲಿ ಸೌಂದರ್ಯೋಪಾಸನೆ- ಸೌಂದರ್ಯೋಸ್ವಾದನೆ ನಶಿಸಿಹೋಗ್ತಿದೆ.


          ಹೀಗೆ ಆದ್ರೆ ಯುವ ಜನಾಂಗದ ಅಧ-ಪತನ ನಿಶ್ಚಿತ. ಹುಡುಗಿ ಅಂದರೆ ಏನು. ಅವರ ಮುಖ ಹೇಗೆ ಇರುತ್ತೆ, make up ಯಾಕೆ ಮಾಡ್ಕೊತಾರೆ,first sight ಅಂದ್ರೆ ಹೇಗಿರುತ್ತೆ..  ಎಂಬಿತ್ಯಾದಿ ಅಂಶಗಳನ್ನು ಪುಸ್ತಕ ಓದಿಯೊ, TV ನೋಡಿಯೊ ತಿಳಿದುಕೊಳ್ಳ ಬೇಕಾಗುತ್ತದೆ. ಸೌಂದರ್ಯ ವರ್ದಕಗಳ ತಯಾರಕರು ಡಾಂಬಾರು-ಕಬ್ಬಿಣ ಸುಣ್ಣ ತಯಾರಿಸ ಬೇಕಾಗುತ್ತೆ.  ಆದ್ದರಿಂದ ಈ ಗಂಭೀರ ವಿಷಯದ ಬಗ್ಗೆ ಯುವ ಜನಾಂಗ ಎಚ್ಚೆತ್ತುಕೊಳ್ಳಬೇಕಾಗಿದೆ. ಪರಿಸರ ಮಾಲಿನ್ಯದ ಬಗ್ಗೆ ಜನರಿಗೆ ತಿಳಿಸಿ ಹೇಳಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಆವಗ್ಲಾದ್ರೂ ಮತ್ತೆ black and white ದುನಿಯಾ colorful ಆಗ್ಬಹುದೆನೋ. ನೀವೇನಂತೀರಾ??. 

ಪರಿಕಲ್ಪನೆ-ರಚನೆ
ದಿಲೀಪ ಕುಮಾರ ಶೆಟ್ಟಿ.

ಚಿತ್ರ ಕೃಪೆ: ಅಂತರ್ಜಾಲ