ಇಂದೆಕೊ....
ತುಂಬಿದೊಲವು ತೂಕಡಿಸಿದೆ,
ಮನಸ ವಾಂಛೆಯಲಿ ಹೂತು.
ತಬ್ಬಲಿ ಇರುವೆಯಂತೆ,
ತಹ-ತಹಿಸಿದೆ ಎದೆ.
ಇಂದೆಕೊ...
ನಿನ್ನ ನೋಡಿದೊಡೆ ಅರಳುವ,
ಎದೆಯ ರೆಪ್ಪೆಗಳೆ ಹೊರಳಿವೆ.
ಆಲೋಚನೆಯ ದಿಕ್ಸೂಚಿ ದಿಗಂತಕ್ಕೊರಗಿದೆ
ದಿಗಂಬರವಾಗಿ, ದಿಕ್ಕಾಪಾಲಾಗಿ.
ಇಂದೆಕೊ....
ಕನಸೊಳಗೆ ಬರುವ ಭ್ರಮರಗಳೂ
ಭ್ರಮೆಯ ಬಾಗಿಲಿಗೆ ಅಂಟಿದೆ.
ಮೊಗವರಳಿಸೋ ನಿನ್ನ ನೆನಪು, ನಶೆ
ಕಮರಿಹೋಗುತಲಿದೆ, ಕಣ್ಮರೆಯಾಗಿದೆ.
ಹದ ಮೀರಿತೆ ಹೃದಯ?
ಸರಿ-ತಪ್ಪಿನ ಸಮ ತೂಕದಲಿ
ತುಂಬಿದೊಲವು ತೂಕಡಿಸಿದೆ.-ದಿಲೀಪ್ ಶೆಟ್ಟಿ