ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಸೋಮವಾರ, ಜುಲೈ 29, 2013

ಹೀಗೂ ಉಂಟೇ...(ಇದು ಎಂಜಿನಿಯರ್ ಹುಡುಗನ ಕಥೆ-ವ್ಯಥೆ...)

        ನಾನ್ ಇವತ್ತು ಬೇಜಾನ್ ಖುಷಿ ಆಗಿದೀನಿ ಕಣ್ರಿ. ಅವತ್ತು sholey hills ನಲ್ಲಿ  ಬಿಟ್ಟಿ johney walker ಕುಡಿದಾಗ್ಲೂ ಇಷ್ಟೊಂದ್ ಖುಷಿ ಆಗಿರ್ಲಿಲ್ಲ ಕಣ್ರಿ.  ಅದಕ್ಕೂ ಕಾರಣ ಇದೆ. ಹೇಳ್ತೀನಿ ಕೇಳಿ.

         ಒಂದಾನೊಂದ್ ಕಾಲದಲ್ಲಿ ಬೆಂಗ್ಳೂರು ಅನ್ನೊ ಬ್ರಮ್ಹಾಂಡ ದಲ್ಲಿ ಎದ್ವಾ, ತದ್ವ enjoy ಮಾಡ್ತಿದ್ದ ಒಬ್ಬ ಬಡಪಾಯಿ ಹುಡ್ಗ engineering ಮಾಡೋಣ ಅಂತ ಬಂದ. ಅವ್ನ ತರಾನೆ ಬೇಕಾದಷ್ಟು-ಬೇಡದೆ ಇರೋವಷ್ಟು ಹುಡುಗ್ರು, ಹುಡ್ಗಿರೂ ಬಂದು ದಬಾಕೋಂಡ್ರು. ಇಂತ time ಅಲ್ಲಿ ಸರಿ ಸುಮಾರು 4 ವರ್ಷಗಳ ಕಾಲ ಸತತ ಪರಿಶ್ರಮ, ಕಾಪಿ ಹೊಡೆಯೋ ಚತುರತೆ ಯೊಂದಿಗೆ ಅಂತೂ ಇಂತೂ VTU ಅನ್ನೊ central jail ನಿಂದ ಹೊರಗ್ ಬಂದ್ವಿ. ಇಲ್ಲಿವರ್ಗು ಮನೆಯವ್ರು ಪುಡಿ ಕಾಸಾದ್ರೂ ಕೊಡ್ತೀದ್ರೂ. ಅದೂ ನಿಂತ್ ಹೋಯ್ತು. ಹೊಟ್ಟೆಗ್ ತಣ್ಣೀರ್ ಬಟ್ಟೆ ಬಿದ್ದಾಗ್ಲೆ ಗೊತ್ತಾಗಿದ್ದು ಈ job ಅನ್ನೊ ಕೆಲ್ಸನ ಮಾಡ್ಬೇಕು ಅಂತ. ಅಲ್ಲಿಗೆ ನಾನು complete ಆಗಿ footpath ಗೆ ಬಂದೆ. ಇನ್ನೆನ್ ಮಾಡೋದು senior ಅನ್ನೊ, ಕೆಲ್ಸ ಮಾಡ್ತೀರೊ so called professionals ಹತ್ರ resume ಅನ್ನೊ ಬಿಕ್ಷಾಪಾತ್ರೆ ಹಿಡ್ಕೋಂಡು facebookನಲ್ಲೂ, gmail ನಲ್ಲೂ sms ನಲ್ಲೂ ಬೆಡೋಕ್ ಶುರು ಮಾಡ್ದೆ. ಅದಕ್ಕೂ 5 ಪೈಸೆ ಬಿಸಾಕ್ದೆ ಇದ್ದಾಗ direct ಫೋನ್ ಮಾಡ್ಬಿಟ್ಟು deal ಮಾಡೋಕೂ try ಮಾಡ್ದೆ. ಊಹೂ.. ಕ್ಯಾ ರೇ?? ಅನ್ನಲಿಲ್ಲ. ಇನ್ನೆನ್ ಮಾಡೋದು ಬೀದಿಗ್ ಬಂದು “ಅಣ್ಣಾ ಕೆಲ್ಸ ಕೊಡಿ, ಅಕ್ಕೊ ಕೆಲ್ಸ ಕೊಡಿ” ಅಂತ ಆಯ್ಕೊಳ್ಳೋಕ್ ಶುರು ಮಾಡ್ದೆ.

      ಇಂತಿಪ್ಪ ಸಮಯದಲ್ಲಿ ನಾವು ಹಲವು, ಅನೇಕನೇಕ company ಗಳ door-mat ಗಳನ್ನು ಗಲೀಜು ಮಾಡಿ “ ನಾವು ಬೇಜಾನ್ ಕಲ್ತಿದಿವಿ, ಒಂದ್ ಕ್ಯಾಮೆ ಕೊಟ್ಟ್ ನೋಡಿ, ಲಿಂಗ ಮೆಚ್ಚಿ ಆಹುದಹುದೆನ್ನುವ ಹಾಗೆ ಕಿತ್ತ್ ಗುಡ್ಡೆ ಹಾಕ್ತೀವಿ, ಸಂಬಳ ಸ್ವಲ್ಪ ಹೆಚ್ಕು ಕಮ್ಮಿ ಮಾಡ್ಕೊಳ್ಳಿ ಸಾಮಿ..” ಎನ್ನುತ್ತ ಅಂಗಲಾಚಿದೆವು.  ಕೆಲವ್ರು "ಪಾಪ" ಅಂದ್ಕೊಂಡು ಬಿಕ್ಷಾಪಾತ್ರೆಗೆ interview ಅನ್ನೋ ಹಿಡಿ ಅಕ್ಕಿ ಹಾಕಿ, ಕೇಳೋ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ರೆ, ಸ್ಟೋವ್ ಕೊಡ್ತೀನಿ ಅಕ್ಕಿನ ಬೆಸ್ಕೋಂಡು ಊಟ ಮಾಡು ಅಂದ್ರು. ಕಡೆಗೂ ಅವ್ರ ಪ್ರಶ್ನೆಗಳ ಬಾಣಕ್ಕೆ ನಮ್ಮ ಬಿಕ್ಷಾಪಾತ್ರೆ ಛಿದ್ರ-ಛಿದ್ರವಾಯ್ತೆ ವಿನಹ ನಮ್ಮ ಮೆದುಳಲ್ಲಿ ಅವಕ್ಕೆ ಉತ್ತರಗಳಿರಲಿಲ್ಲ. ಕೊಟ್ಟ ಅಕ್ಕಿಯನ್ನ ಮೂಸಿ ನೋಡೋದ್ರೋಳ್ಗೆ ಕಸಿದುಕೊಂಡ್ ಬಿಟ್ರು. ಅವಾಗ್ಲೆ ನಾನು ಪ್ರಚಂಡ ಶಪಥ ಮಾಡ್ಬಿಟ್ಟೆ. “ Every ಡಾಗ್ has a day, ಅನ್ನೋ ಹಾಗೆ every engineer has a day. ನನ್ ಮಕ್ಳ ನಂಗೆ ಕೆಲ್ಸ ಸಿಕ್ಕ ಮೇಲೆ ನಾನು ಒಂದ್ ದಿನ ನಿಮ್ಮ company empoyeesನ  interview ಮಾಡ್ತೀನಿ ಆವಾಗ್ ಬನ್ನಿ ಇಡ್ತೀನಿ ನಿಮ್ಗೆ ಬಗ್ನಿ ಗೂಟ..”.

       One fine day ನಮ್ಗು ಕೆಲ್ಸ ಸಿಕ್ತು. Trim ಮಾಡಿರೊ ಮೀಸೆನ ಹಾಗೆ ತಿರುವೊಕೆ ಶುರು ಮಾಡ್ದೆ. ಆದ್ರೂ ಏನೋ ಒಂದು miss ಹೊಡಿತಿತ್ತು. ಏನಪ್ಪ ಅಂತ ಯೋಚ್ನೆ ಮಾಡಿದಾಗ ಅದು ನನ್ನ “ಪ್ರತಿಜ್ನೆ”.  ಹಂಗು ಹಿಂಗು 3-4 ವರ್ಷ ತಳ್ಕೋಂಡ್ ಬಂದ್ವಿ. ಕಿಸೆಲಿ ಬೇರೆಯವರ visiting card ಬದ್ಲು credit cards ಬಂದವು. black and white ಫೋನ್ ಹೋಗಿ colour ಆಯ್ತು. ಶ್ರೀರಾಮ್ ಪುರ jeans ಹೋಗಿ branded ಆಯ್ತು. ಆದ್ರೂ..  ನಾನ್ ಆ ದಿನಕ್ಕೆ ಕಾಯ್ತ ಇದ್ದೆ. ಅವತ್ತೊಂದ್ ಅನಾಮಿಕ call ಬಂತು. “ಹೀಗ್ ಹೀಗೆ, ಆದ್ದರಿಂದ ಹೀಗ್ ಹೀಗೆ ಮಾಡ್ಬೇಕು, ನೀವು ಹೇಗ್ ಹೇಗ್ ಮಾಡ್ತೀರಾ ?? ”ಅಂದ್ರು. ಅಂದ ಹಾಗೆ ಅನಾಮಿಕ ಅನ್ನೋರು ನಮ್ಮ HR. ಅವ್ರು ಹೇಳಿದ್ದು ನಾವು ಬಯಸಿದ್ದು ಯೆಲ್ಲಾ ಹತ್ತ್-ಹತ್ರ ditto-ditto. Developer ಕೇಳಿದ್ದೂ corner side cubicle, manager ಕೊಟ್ಟಿದ್ದು corner side cubicle. “ನಾಳೆ walk-in ಇದೆ, ನೀವು candidates interviews ತಗೋಬೇಕು...... “ ಆಮೇಲೆ ಏನೇನೊ ಹೇಳಿದ್ರು, ನಮಗೆ ಕೇಳ್ತೀರ್ಲಿಲ್ಲ. ನಮಗೆ ಕೇಳಬೇಕಾದದ್ದು ಸ್ಪಷ್ಟ ವಾಗಿ ಕೆಳಸ್ತು. ನಾವು ಸ್ವಲ್ಪ buildup ಕೊಟ್ವಿ. “ oh.. sorry, ನಂಗೆ ಬೇರೆ ಕೆಲ್ಸ ಇದೆ.. ” ಇಷ್ಟ್ ಹೇಳಿದ್ದೆ ತಡ “ಹೌದಾ, ಹಾಗಾದ್ರೆ ನಾನ್ ಬೇರೆಯವ್ರನ್ನ contact ಮಾಡ್ತೀನಿ” ಅಂದ್ ಬಿಟ್ರು ನಂ HR. ಅಯ್ಯೋ ದೇವ್ರೆ buildup ಎಲ್ಲ ಎಡವಟ್ಟ್ ಮಾಡ್ತೀದೆ ಅಂದ್ಕೊಂಡು “ಇಲ್ಲ, ಇಲ್ಲ ನಾಳೆ ನಾನ್ free ಮಾಡ್ಕೊತಿನಿ ಬಿಡಿ, ನಾನೇ ಬರ್ತೀನಿ ಇಂಟರ್ವ್ಯೂ ತಗೋಳಕ್ಕೆ ”ಅಂತ convince ಮಾಡ್ದೆ.

      ಯುದ್ದ ಸನ್ನದ್ದ ನಾದ ದಿಲೀಪ, ಕಡೆಗೂ ರಣಾಂಗಣಕ್ಕೆ ಇಳಿದೇ ಬಿಟ್ಟ. ಒಂದು ಇಬ್ಬರ interview ಮುಗಿತು, ಮೂರನೆಯವನ resume ತಗೊಂಡ್ ನೋಡ್ತೀನಿ “ಹಾ ಹಾ ಹಾ.. ಅದೇ ಆ ನನ್ನ ವೈರಿ company ಯ candidate.” ಕಿವಿಗೆ ಕೈ ಹಾಕೊಂಡ್ ಕೆರ್ಕೊಳ್ಳೊನಿಗೆ ear bud ಕೊಟ್ಟಂಗೆ ಆಯ್ತು. ಬಿಡ್ತೀವ ನಾವು, ಎದೆನ ಮುಂದ್ ಮಾಡ್ಕೋಂಡು, ಹಲ್ಲನ್ನ ಮಸೆಯುತ್ತಾ, ಕಾಲ್ಮೆಲೆ ಕಾಲ್ ಹಾಕೊಂಡು ಬಿಟ್ಟೆ ನೋಡಿ ಬಾಣನ.. ವೈರಿಯ ರುಂಡ ಮುಂಡ ಚೆಂಡಾಡುವಷ್ಟರಲ್ಲಿ, ನಮ್ಮ್ ಬಾಣ ನಮ್ಗೆ ವಪಾಸ್ ಬಂತು. ಅವನಲ್ಲಿ ನಾನು ನನ್ನನ್ನ ಕಂಡೆ, ನನ್ನ ಪರಿಸ್ಥಿತಿ ನಮ್ಗೆ ವಪಾಸ್ ಬಂದ ಹಾಗೆ ಆಯ್ತು. ಅಲ್ಲಿಗೆ ನನ್ನ ಅಂತರಾತ್ಮ ದಲ್ಲಿ ಹೊತ್ತಿ ಉರಿಯುತ್ತಿದ್ದ ಧೇಷಾಗ್ನಿಯೊಂದು ನಂದಿ ಹೋಯಿತು. ಅಲ್ಲಿಗೆ ಈ ಕಥೆ ಮುಗಿಯಿತು. ಆ candidate ಎನಾದ ಅಂತ ಕೇಳ್ತೀರಾ, ಅಯ್ಯೋ ಅದು ತುಂಬಾ confidential ಕಣ್ರಿ. ಹಾಗೆಲ್ಲಾ ಹೇಳೋಕಾಗಲ್ಲ. ಮತ್ತೆ ಸಿಗೋಣ.

-ದಿಲೀಪ ಕುಮಾರ ಶೆಟ್ಟಿ

(ಚಿತ್ರ ಕೃಪೆ: ಅಂತರ್ಜಾಲ)