ಅವಳೆದೆಯ ಗಡಿಯಾರ ನನ್ನ ನೊಡುವ ಹೊತ್ತು,
ಗಂಟೆ ಗಂಟೆಯೂ ನಿಮಿಷ.
ಮುಳ್ಳು ಮುಳ್ಳನು ಚುಂಬಿಸುತಿರೆ
ಮುಳ್ಳು ಮುಳ್ಳನು ಚುಂಬಿಸುತಿರೆ
ನಿಂತೇ ಬಿಡಬಾರದಿತ್ತೆ ವರುಷ.
ಮೊನ್ನೆ
ಮಧ್ಯಾಹ್ನ, ನಿನ್ನೆ ನಡುಗುವ ಚಳಿ,
ಮುಂಜಾವಿನ
ಮಂಪರು, ಸಂಧ್ಯಾಕಾಲದ ನೆಳಲು,
ನಿನ್ನ ನೆನಪು
ಮಾಡದ ಗಳಿಗೆ,
ನೆನೆದು ಹೋದ ದೀವಿಗೆ.
ನೀ
ಇರದಿರೆ ಮನದೊಳಗೆ, ಮುರಿದ
ಹಾಗಿದೆ ಮನದ ಮಳಿಗೆ.
ಮುಳ್ಳು
ಮಿಟುಕುತಲೂ ಇಲ್ಲ.
ಪ್ರತಿ
ಕ್ಷಣವೂ ಯುಗದಂತೆ, ಹೊಸ
ಪರ್ವ ಪುಟಿದಂತೆ.
ಕಾಲನ
ಕಾಲ್ಕೆಳಗೆ ಗಿರಕಿ ಹೊಡೆದಂತಿತ್ತು.
ಏನು
ಹೇಳದೆ, ಕಣ್ಣು ಮಿಟುಕಿಸದೆ, ಸದ್ದೆ ಮಾಡದೆ
ಗುಳಿ
ಕೆನ್ನೆಗೊಂದಿಷ್ಟು ಮುತ್ತನುದುರಿಸಿ ನೀ ಓಡಲು
ನನ್ನೆದೆಯ
ಗಡಿಯಾರ ನಿನ್ನ ಬಡಿತವ ಅನುಕರಿಸಿ,
ಒಂದೇ
ದಾಟಿಯಲಿ ಮತ್ತೆ ಡವ-ಡವಿಸುತಲಿತ್ತು.
ದಿಲೀಪ್ ಶೆಟ್ಟಿ.
(ಚಿತ್ರ ಕೃಪೆ:
ಅಂತರ್ಜಾಲ)