ಕಟ್ಟ ಹೊರಟಿಹೆ ಹೊಸ ಕನಸ ಕೋಟೆಯ.
ನಿನ್ನ ನೆನಪಿನ ಮುಳ್ಳ ತೆಗೆದು,
ಪ್ರೀತಿ ಬಿಗಿದು, ಕಟ್ಟಿ ಕಣ್ಣಿರ ಕಟ್ಟೆಯ.
ಹಾತೊರೆದ ಜೀವವ ನೀ ತೊರೆದು
ಬಿಟ್ಟರೆ,
ಮಾತಿರದೆ ಮೌನವು ಕಾತುರದಿ
ಕಾದಿರಲು,
ಹಂಬಲಿಸಿ ಹಲುಬುವ ಹುಂಬ ಹಸುಳೆಯ
ಹಿಂಡಿ ಹೋದೆಯಾ.
ಎಣ್ಣೆ ಬಾಣಲೆಗೆ ಬಿದ್ದ ಮಿಂಚು ಹುಳು
ನಾನು.
ಹೆಣ್ಣೇ, ಬಾಳಲು ಬಿಡದೆ ಹಾಳು ಮಾಡಿದೆ
ನೀನು.
ನನ್ನ ತನು ನಿನ್ನೋಡವೆ, ನಿನ್ನ ತನ ನನ್ನೊಡಲು
ಎನ್ನುತಲಿ ಬಂದಡಗಿ ಚಿತ್ತ ಸ್ವಾಸ್ತ್ಯವ ಕದ್ದು,
ಗಗನಕುಸುಮವಾದೆಯಾ??
ತಿರುಗೊ ಆಗಸದಾಚೆ
ಒರಗೊ ಹಾಸಿಗೆ ಹಾಸಿ
ಮರುಗೊ ನನ್ನನು ಬಿಟ್ಟು
ಕರಗಿ ಹೋದರೆ ಇನ್ನು
ಕೊರಗೊ ಮನಸದು ಎಂದೂ
ಮಸಣದ ಮಣ್ಣು.
-ದಿಲೀಪ್ ಶೆಟ್ಟಿ.
(ಚಿತ್ರ ಕೃಪೆ : ಅಂತರ್ಜಾಲ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ