ಓಡಿಹೋಗಿ ಮದುವೆ ಆದರೆ
ಲವ್ ಮ್ಯಾರೇಜು
ಮನೆಯವರೋಪ್ಪಿ ಮಾಡಿದರೆ
ಲೈವ್ ಮ್ಯಾರೇಜು .
ಲೇಖನಿ
ಲೇಖನಿ ಖಡ್ಗದಷ್ಟೇ ಹರಿತವಾದುದು.
ಅದಕ್ಕೆ ಇರಬೇಕು, ಲೇಖಕರ
ಮನೆಯ ಕಸದ ಬುಟ್ಟಿ
ಆಗಿದೆ ಹರಿದ ಕಾಗದಗಳ
ತೊಟ್ಟಿ.
ಎನ್ನುತ್ತಿದ್ದವಳು
ಮದುವೆಯಾದ ಮೇಲೆ ಹೇಳುತ್ತಿದ್ದಾಳೆ
ಸಾದಿಸಿದರೆ ಗಂಡನ
ಸಂಬಳ ನುಂಗಬಹುದು.
ದಮ್ಮು
ಎಂದಾಗ ಮುಚ್ಚಿಕೊಂಡು ಬಂದ.
ಕೇಳಿದರೆ,
ದಮ್ಮಿಲ್ಲ ನನಗೆ , ಕೆಮ್ಮು ಮಾತ್ರ ಅಂದ.
ರುಪಾಯಿ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದೆ ಕೋಟಿ ರುಪಾಯಿ,
ಹೆಂಡತಿ ತವರಿಗೆ ಹೊರಟಳು ಎಂದರೆ
ಪಕ್ಕದ ಮನೆ ಸುಬ್ಬಿಗೆ ಹಾಯಿ..
ಪಕ್ಕದ ಮನೆ ಸುಬ್ಬಿಗೆ ಹಾಯಿ..
(ನೀ)ನಲ್ಲ
ನಿನ್ನೆಯವರೆ
ನೀ ನನ್ನವನು ನಲ್ಲಾ, ಎನ್ನುತ್ತಿದ್ದವಳು
ಪಕ್ಕದ ಮನೆಯ ಹೊಸ ಹುಡುಗನನ್ನ
ನೋಡಿ ಹೇಳುತ್ತಿದ್ದಾಳೆ
ನೋಡಿ ಹೇಳುತ್ತಿದ್ದಾಳೆ
ನೀ ನನ್ನವನ್ ಅಲ್ಲಾ.
ನೆಂಟು
ಮೊನ್ನೆ ಮೊನ್ನೆಯಷ್ಟೇ ಬೆಳೆಯಿತು
ನನ್ನ ಅವಳ ನೆಂಟು.
ಈಗ ಕೇಳಿದರೆ ಆಗಿದ್ದಾಳೆ
ನನ್ನವಳು ಪ್ರೆಗ್ನೆಂಟು.
ಉಹೂ!! ಒಲ್ಲೆ ಎಂದೇನು ಒಡನೆ.
ಕನಸು ಹಾರಿ, ಮನಸು ಮಾರಿ
ಸಂಜೆಯಿದ್ದಳು ಪಕ್ಕದಮನೆಯವ-
ನೊಡನೆ.
ಕಣ್ಣಲ್ಲಿ ಕಣ್ಣನಿಟ್ಟು ನಿನ್ನೆ
ನೋಡಿದೆ ಅಂದು.
ಅದೇ ತಪ್ಪಾಗಿಹೋಯಿತು
ಕಳೆಯಬೇಕಿದೆ ನಿನ್ನೆ
ನಾಡಿದ್ದು ಇಂದು.
-ದಿಲೀಪ್ ಶೆಟ್ಟಿ.
(ಚಿತ್ರ ಕೃಪೆ: ಅಂತರ್ಜಾಲ)
ವಾವ್.. ಸೂಪರ್ ದಿಲೀಪರೇ..
ಪ್ರತ್ಯುತ್ತರಅಳಿಸಿಲೇಖನಿ, ಲವ್ ಮ್ಯಾರೇಜು ಭಯಂಕರ ಇಷ್ಟ ಆಯ್ತು :-)
ನಿಮ್ಮ ಬ್ಲಾಗಿನಲ್ಲಿ ಈಗ ಓದಿದೆ.. ಅಲ್ಲಿ ಹಾಕಿದ್ದಷ್ಟೇ ಅಲ್ಲದೇ ಇಲ್ಲಿರುವುದೂ ಸೂಪರ್... ರುಪಾಯಿ, ದಮ್ಮು, ಸಂಬಳವೂ ಸೂಪರ್.. ರುಪಾಯಿ ಓದಿ ನಕ್ಕೂ ನಕ್ಕೂ ಸುಸ್ತಾಯಿತು :-)
ಪ್ರತ್ಯುತ್ತರಅಳಿಸಿಹನಿಗವನಗಳು ಮಸ್ತಾಗಿದೆ.....
ಪ್ರತ್ಯುತ್ತರಅಳಿಸಿಇಷ್ಟ ಆಯಿತು..
nice chenagide nemma lekhani :)
ಪ್ರತ್ಯುತ್ತರಅಳಿಸಿ