ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಸೋಮವಾರ, ಡಿಸೆಂಬರ್ 30, 2013

ಒಂದು ಎಣ್ಣೆ ಕಥನ

          ಅವತ್ತು ಶನಿವಾರ ಬೆಳಗ್ಗಿನ ಜಾವ 2:30. ಕರಿ-ಗತ್ತಲು. ಕತ್ತಲು ಕಪ್ಪಾಗೆ ಇರುತ್ತೆ ಬಿಡಿ!!!. ಆಗ black and white ನಾಯಿಯೊಂದು ಕಲರ್ ಕಲರ್ plastic cover ಕಚ್ಚುತ್ತಾ, ಬೆಂಗ್ಳೂರಲ್ಲಿ 30 x 40 ಸೈಟ್  ಇದ್ದವ್ರ ಹಾಗೆ ನಾನೇ ಯಜಮಾನ ಅನ್ನೋ ಅಹಂ ಅಲ್ಲಿ  ಬೀದಿ ಮದ್ಯೆ ಕೂತಿತ್ತು. ನಾನು ಮನೆಯಿಂದ bag ಹಿಡ್ಕೊಂಡು ಅದೇ ಮಾರ್ಗವಾಗಿ main road ಕಡೆ ಹೊರಟೆ. ಕರಿ ಮುಖದ ನಾಯಿ ಗೋದಿ ಮುಖದ ನನ್ನನ್ನ ಯಾಕೋ ವಿಚಿತ್ರವಾಗಿ ನೋಡೋಕ್ ಶುರು ಮಾಡ್ತು. (ಅದು ಕಚ್ಚತಾ ಇರೊ cover ನ ಕದಿಯೊಕ್ ಬಂದವರ ತರಹ). ನಮ್ಗೆ ಎದೆ ಒಳ್ಗೆ ಹೊಟ್ಟೆ ಕಿವುಚಿದ ಅನುಭವ. ಇಂತ time ನಲ್ಲಿ trip ಹೋಗೊದು ಬೇಕಿತ್ತಾ ಅಂದ್ಕೊಂಡೆ. ಇನ್ನೇನು ಅದು plastic cover ನ ಬಿಟ್ಟು ನನ್ನ ಮೇಲ್ ಧಾಳಿ ಮಾಡ್ಬೇಕು... ಕೀ.. ಕೀ.. i20 ಕಾರು ಅಲ್ಲಲ್ಲ M80 (ಕಿತ್ತೊಗಿರೋ) ಗಾಡಿಯಲ್ಲಿ ದಾಡಿ ಬಿಟ್ಟಿರೊ body ಒಂದು horn ಹಾಕ್ತಾ ಪಾಸ್ ಆಯ್ತು. ಅದ್ರ ಕರ್ಕಷ horn ಸೌಂಡಿಗೆ BBMP ನಾಯಿ ಹಿಡಿಯೋರ van ಅಂದ್ಕೊಂಡು ಎದ್ನೋ-ಬಿದ್ನೋ ಅನ್ನೋ ಹಾಗೆ ನಾಯಿ ಕಾಲು ಕಿತ್ತಿತು. ನಾನು ನಿದಾನವಾಗಿ BTM main road ಹತ್ರ ಬಂದು ನಿಂತೆ.


          ಈ ತಡ ರಾತ್ರಿ ( ಸ್ವಲ್ಪ ಬೇಗ ಹಗಲು) main ರೋಡಲ್ಲಿ ಎನ್ ಕಿತ್ತ್ ಗುಡ್ಡೆಹಾಕ್ತನೆ ಇವನು ಅಂತ ತಾವುಗಳು ಅಂದ್ಕೊಂಡ್ರ?. ನಾವುಗಳು ಒಂದು tripಗೆ ಹೊರಟು ನಿಂತಿರೋದು. ನಾವೇ ಗೈಡ್. ಯಾಕಂದ್ರೆ ಹೋಗ್ತೀರೋದು ನಮ್ಮೂರಿಗೆ. ಕಡಲ ತಡಿಯ ಕುಂದಾಪುರಕ್ಕೆ. ಹೋಗ್ತೀರೋರು 5 ಮಂದಿ. ನಾನು ಹಾಗೂ ನನ್ನ ಗೆಳೆಯ ಮತ್ತು ಅವನು ಹಾಗೂ ಅವನ ಗೆಳೆಯರು.  ಅಂದ್ರೆ ಹೋಗೊ 5 ಜನರಲ್ಲಿ ನನಗೆ ಗೊತ್ತಿರೋರು ನಾನು ಮತ್ತೆ ನನ್ನ ಗೆಳೆಯ. ಉಳಿದ 3 ಜನ ನನಗೆ ಅ-ಪರಿಚಯಸ್ತರು. ಎಲ್ಲ ನಾಲ್ಕು ಜನರು (ನನ್ನನ್ನ ಬಿಟ್ಟು) ಬಡಗು ದಿಕ್ಕಿನವರು. ಅಂದ್ರೆ northy ಗಳು. (ಸ್ವಲ್ಪ ನಾರ್ತ ಇದ್ರು). ದೆಹಲಿ, ಬನಾರಾಸ್, ಪಂಜಾಬ್ ನವರು. ಅವ್ರಿಗೊಂದು ಕರಾವಳಿಯ ಉಪ್ಪು ನೀರು ಕುಡಿಸೊ ಪ್ರೋಗ್ರಾಮ್ ನಮ್ಮದು. ಗುಯ್ಯಿ.. ಅಂತ fully altered Mitsubishi lancer ಕಾರ್ ಬಂದು ನನ್ನ ಹತ್ರ ಬಂದು ನಿಂತಿತು. ನನ್ನ ಗೆಳೆಯ ಅವರ ಗೆಳೆಯರನ್ನ ಪರಿಚಯ ಮಾಡ್ಸ್ದ. ಹಾಯಿ-ಭಾಯಿ ಗಳ ನಡುವೆ ಕಾರು ಹೊರಡ್ತು. ದೇವಸ್ತಾನದಲ್ಲಿ ಊದುಬತ್ತಿ ಪರಿಮಳ ಹೇಗೆ ಗಮ್ಮ್ ಅನ್ನತ್ತೋ ಹಾಗೆ ಸಿಗರೇಟಿನ ಪರಿಮಳ ಮೂಗಿನ ಇಕ್ಕೆಲಗಳಲ್ಲಿ ನುಸುಳುತ್ತಿತ್ತು. ಕಾರಿನ ಡಿಕ್ಕಿಯಲ್ಲಿ ನಾಲ್ಕು ಫುಲ್ bottle ವ್ಹಿಸ್ಕಿ. Drive ಮಾಡೊ ಗೆಳೆಯನಿಗೋಸ್ಕರನೇ ಅಂತ goa ವೈನು. ಚಿಪ್ಸ್, ಗೋಡಂಬಿ, ನಿಪ್ಪಟ್ಟು. ಪಕ್ಕಾ bachelors ಟ್ರಿಪ್. ಒಂದು ಟ್ರಿಪ್ ನ ಹೇಗೆ ಎಂಜಾಯ್ ಮಾಡ್ಬೇಕು ಅನ್ನೋದನ್ನ ಇವ್ರಿಂದ ಕಲಿಬೇಕು. ಪ್ರತಿಯೊಂದು ಗಳಿಗೆ ಯಾವುದೇ ಜಂಜಾಟವಿಲ್ಲದೆ, ನಾಳಿನ ಸೋಗಿಗೆ ತಲೆ ಕೆಡಿಸದೆ, ಹಣ ಅನ್ನೋ ಸತ್ತ ಮರದ ಕಾಗದದ ಹಾಳೆಗೆ ಬೆಲೆ ಕೊಡದೆ ಇಂದಿನ ಗಳಿಗೆಯನ್ನ ಮನಸ್ಸಾರೆ ಆಸ್ವಾದಿಸುವವರು ಉತ್ತರ ಭಾರತೀಯರು. ಒಮ್ಮೊಮ್ಮೆ ಇವರಿಗೆ ದುಡ್ಡಿನ ಬೆಲೆನೆ ಗೊತ್ತಿಲ್ಲ, ಬರೀ ಶೋಕಿ. ದುಂಡು ವೆಚ್ಚ. ಅಂತೆಲ್ಲ ಅಂದ್ಕೋಬಹುದು. ನಿಜ. ಅಲ್ಲಿನ ಸಂಸ್ಕೃತಿ. ಜೀವನ ವೈಶಿಷ್ಟ್ಯ ,ರೀತಿ ರಿವಾಜುಗಳೆ ಬೇರೆ. ನಮ್ಮವರಂತೆ ಯೋಚಿಸೋದಿಲ್ಲ. ನಾಳಿನ ಚಿಂತೆ ಇಲ್ಲ. ಬಂದಿದ್ದನ್ನ ಬಂದ ಹಾಗೆ ಅನುಭವಿಸೊ ಜನ. ಕನಸನ್ನ ನನಸು ಮಾಡ್ಕೊಳ್ಳೋ ಜನ. ದುಡ್ಡಿನ ಜೊತೆ ಕನಸಿನೊಂದಿಗೆ ರಾಜಿ ಮಾಡ್ಕೊಳ್ಳೋರಲ್ಲ. ಹಾಗಾಗಿ ಪ್ರವಾಸದ ಪ್ರತಿ ಗಳಿಗೆಯನ್ನು ಆನಂದಿಸೋರು. ಆನಂದ ಅನ್ನೋದು ವ್ಯಕ್ತಿಗತ. ಕೆಲವರಿಗೆ ಪ್ರೇಕ್ಷಣೀಯ ಸ್ಥಳ ಕುಷಿ ಕೊಡ್ಬಹುದು- ಇನ್ನೂ ಕೆಲವರಿಗೆ ಪ್ರಯಾಣವೇ ಕುಷಿ ಕೊಡುತ್ತೆ.

                            

          ಗಂಟೆ 3:45 ಬೆಳ್ಳಿಗ್ಗೆ .ತುಮಕೂರು ರಸ್ತೆಯ ಮೊದಲ ಟೋಲ್ ನ ನಂತರ ಚಹಾ ಕುಡಿಯೋಣ ಅಂತ ಗಾಡಿ ನಿಲ್ಲಿಸಿ ಅಲ್ಲೇ ಇದ್ದ ಗೂಡು ಅಂಗಡಿಯಲ್ಲಿ ಚಹಾ ಹೀರಿದೆವು. ಚಹಾ ಆದ್ಮೇಲೆ ಒಂದ್-ಒಂದ್ ಪೆಗ್ಗು ವಿಸ್ಕಿ ಗುಳುಂ ಸ್ವಾಹಾ.. ಪಂಜಾಬಿ ಬಲ್ಲೆ ಬಲ್ಲೆ ಇನ್ನೊಂದು ಪೆಗ್ಗು ವಿಸ್ಕಿ, ಟೀ ಜೊತೆಗೆನೇ ಎತ್ಬಿಟ್ಟ. (ವ್ಹಿಸ್ಕಿ ಆದ್ಮೇಲೆ ಟೀ. ಜೊತೆ ಜೊತೆಗೆ). ನಮ್ಮಲ್ಲೂ ಇಂತ ಪುಣ್ಯಾತ್ಮರೂ ಇದ್ದಾರೆ. ಆದ್ರೆ ಬೆಳಿಗ್ಗೆ 9 ಗಂಟೆ ಆಗೋ ವರೆಗೂ 2 ಬಾಟ್ಲಿ ವ್ಹಿಸ್ಕಿ ನ ಹಿಸ್ಕಿ-ಹಿಸ್ಕಿ ಕಾಲಿ ಮಾಡಿದ್ರು. ನಮ್ಗೆ ಇದು ಮೊದಲ ಅನುಭವ. ಮೊದ್ಲೇ ಸರಿಯಾಗಿ ಬಾಷೆ ಬರಲ್ಲ. “ವ್ಹಿಸ್ಕಿ.. ಇಸ್ಕಿ ಮಾ.. ಬೆಹೇನ್..” ಒಂದರ ಮೇಲೆ ಒಂದರಂತೆ ಸಂಸ್ಕೃತ, ಪಂಜಾಭಿ.. ಬೈಗುಳ. “ಇವ್ರ್ ಬೈತವ್ರೋ, ಹೋಗಳ್ತವ್ರೋ ಗೊತ್ತಾಗ್ತಿರ್ಲಿಲ್ಲ. ಹಾಗೂ ಹೀಗೂ ಮಾಡಿ ಕನ್ನಡದಲ್ಲಿ ಅಚ್ಚು ಕಟ್ಟಾಗಿ ಬಯ್ಯೋದನ್ನ ಹೆಳ್ಕೋಟ್ಟು ತೀರ್ಥಹಳ್ಳಿ ತಲುಪೋವಾಗ ತಂದಿದ್ದ ತೀರ್ಥಯೆಲ್ಲಾ ಕಾಲಿ. ಗಂಟೆ 11. ಹೊಟ್ಟೆ ಹಾಗೆ ಚುರ್ಗುಟ್ಟಿತ್ತು. ಅಲ್ಲೇ ಚಿಕ್ಕ ಹೋಟೆಲಿಗೆ ಹೊದ್ವಿ. “ಸಾರ್, ತಿಂಡಿ ಏನಿದೆ?” ಕೆಳ್ದೆ. “ಪೂರಿ, ಇಡ್ಲಿ, ಗೊಳಿಬಜೆ” ಅಂದ ಹೊಟೇಲ್ ಮಾಣಿ. “ಅಭೇ.. ಕ್ಯಾ..? ಗೋಳ್-ಭಾಜಿ. ಓ ಕ್ಯಾ ಹೋತಾ ಹೈ” ಅಂದ ದೆಲ್ಹಿವಾಲಾ. ನಾವು ನಮ್ಮ ಹರ್ಕು ಪುರ್ಕು ಹಿಂದಿಯಲ್ಲಿ “ಸಲ್ಪ ಸಮಾಧಾನ ಮಾಡ್ಕೊ, ಆರ್ಡರ್ ಮಾಡ್ತೀನಿ ನೀನೆ ನೋಡು” ಅಂತ ಹೇಳಿ ಆರ್ಡರ್ ಮಾಡಿದೆ. ಗೊಳಿಬಜೆ ಬಂತು. ಎಲ್ರೂ ತಿಂದ್ರು. ಇಷ್ಟ ಆಯ್ತು. ಇನ್ನೊಂದ್ 5 ಪ್ಲೇಟು ಒಳಗ್ ಹೋಯ್ತು. ನೀವೂ ತಿಂದ್ ನೋಡಿ ಚೆನ್ನಾಗಿರುತ್ತೆ ಗೊಳಿಬಜೆ. ಅಂದ ಹಾಗೆ ಬೆಂಗಳೂರಲ್ಲಿ ಗೊಳಿಬಜೆಗೆ ಮಂಗ್ಳೂರ್ ಬೋಂಡ/ಬಜ್ಜಿ ಅಂತ ಕರಿತಾರೆ. ಅಲ್ಲಿಂದ ಕಾಲ್ಕೀತ್ತು, ಟಾರ್ ಕಿತ್ತೊಗಿರೋ ಆಗುಂಬೆ ದಾರಿಯಿಂದ ಕುಂದಾಪುರಕ್ಕೆ ಪ್ರಯಾಣ ಮುಂದುವರೆಸಿದ್ವಿ. ಸುಮಾರು ಸಂಜೆ 3 ಗಂಟೆಗೆ ಕುಂದಾಪುರ ತಲುಪಿದ್ವಿ. ಸಂಜೆಗೆ ಪಡುಕೆರೆ ಬೀಚ್, ರಾತ್ರಿ ಕಿನಾರ, ಎಣ್ಣೆ, ಮೀನು,ನೀರ್ ದೋಸೆ, ಎಣ್ಣೆ ಎಣ್ಣೆ.. nonstop ಬೆಳಿಗ್ಗೆ 3 ಗಂಟೆವರೆಗೆ. ಮತ್ತೆ ಬೆಳಿಗ್ಗೆ 8 ಗಂಟೆಗೆ st. ಮೇರಿಸ್ ದ್ವೀಪಕ್ಕೆ ಸಿದ್ದ ವಾಗಿ ನಿಂತಿಂದ್ರು. ಯಾವ hangover ಇರ್ಲಿಲ್ಲ. ಎಷ್ಟ್ ಎಣ್ಣೆ ಹೊಡದ್ರೂ ಜಗ್ಗೋ ಜಾಯಮಾನ ಅವ್ರದ್ದಲ್ಲ.

          “ಭಾಯಿ.. ಕುಡಿ ಮಸ್ತ್ ಲಗ್ತಿ ಹೈ..”. ಹಾಗ್ ನೋಡಿದ್ರೆ ನಿಮ್ಗೆ ಇವ್ರು ನಾರ್ತಿಸ್ ಹುಡುಗ್ರು ಅಂತ ಬಾಹ್ಯವಾಗಿ ಗುರುತಿಸೊಕ್ ಆಗೋಲ್ಲ. ನಾವು ಅವ್ರು ಒಂದೇ ರೀತಿಲಿ ಇರ್ತೀವಿ. “ಗುರು, ಅವ್ಳು ನೋಡೋ ಸಕ್ಕತ್ತಾಗವ್ಳೆ” ಅನ್ನೋದನ್ನ ಅವ್ರು ಹಿಂದಿಯಲ್ಲಿ ಹೇಳ್ತಾರೆ ಅಷ್ಟೇ. Men will be men.  ಆದ್ರೆ ಇವ್ರೂ ಉತ್ತರ ಭಾರತದ ಹುಡ್ಗಿರು ಅಂತ ಸಂತೆಲೂ ಪತ್ತೆ ಹಚ್ಚಬಹುದು. ಅವರ ಬಳುಕೊ ಸೊಂಟ, ಮಿನಿ ಸ್ಕರ್ಟ್, ಕಾಲಿ ಹಾಳೆಯಂತ ತೊಡೆ, ಯಾರಿಗೂ care ಮಾಡದೆ ಇರೊ attitude. ಸೂರ್ಯ ಮುಳುಗಿ ಹೊದ್ರೂ ಹಾಕಿರೋ sun-glass. ಹೀಗೆ.. ಒಂದಿಲ್ಲೊಂದು ರೀತಿಯಲ್ಲಿ ದಕ್ಷಿಣ ಭಾರತದ ಹುಡುಗಿಯರಿಗಿಂತ ಬಿನ್ನ-ವಿಬಿನ್ನ. ಈಗೀಗ ನಮ್ಮ ಹೆಂಗಳೆಯರೂ ಅವರಂತೆ ಹವಾ-ಭಾವ ಮೈ ಮಾಟವನ್ನ ಪ್ರದರ್ಶಿಸಿದರೂ ಸಹ ಅವರಂತೆ ಅಷ್ಟೊಂದು bold ಆಗಿರೊ attitude ಪಡಿಯೋಕೆ ಆಗೋಲ್ಲ. ಭಯ-ಭಕ್ತಿ, ಆಚಾರ-ವಿಚಾರ ಇನ್ನೂ ಇದೆ. ಅಂತೂ ಒಂದು ಸಣ್ಣ ಪ್ರವಾಸ ತೀರ್ಥ ದಿಂದ ಶುರುವಾಗಿ ತೀರ್ಥದೊಂದಿಗೆ ಮುಗಿತ ಬಂತು. ಇವರು ಮಾಡಿದ್ದು ಇಷ್ಟೇ, ಬೀಚೆಲ್ಲ ಸುತ್ತಾಡಿ, ಮುಳುಗಾಡಿ, ಎಂಜಾಯ್ ಮಾಡಿ ಹೋಗೊ ಮುನ್ನ ಮತ್ತೊಮ್ಮೆ ಮರವಂತೆ ಬೀಚ್ ನ ರಮಣೀಯ ದೃಶ್ಯವನ್ನ ಕ್ಯಾಮರಾ ದಲ್ಲಿ ಸೆರೆ ಹಿಡಿಯುತ್ತಾ, ದಾರಿಯುದ್ದಕ್ಕೂ ಗಾಡಿಗೂ, ಬಾಡಿಗೂ ಎಣ್ಣೆ ಹಾಕುತ್ತಾ ಒಂದು ಸಂತೃಪ್ತಿಯ ಕುಷಿಯಿಂದ ಬೆಂಗಳೂರಿನತ್ತ ಪಯಣ ಬೆಳೆಸಿದರು.

-ದಿಲೀಪ್ ಕುಮಾರ್ ಶೆಟ್ಟಿ.

ಚಿತ್ರಕೃಪೆ:ಅಂತರ್ಜಾಲ

3 ಕಾಮೆಂಟ್‌ಗಳು: