ಕಣ್ಣ ಮಿಟುಕಿಸಿ ಕೆನ್ನೆ ಏರಿಸಿ
ಸಣ್ಣ ಸಣ್ಣಗೆ ಸನ್ನೆ ಮಾಡುತ
ನನ್ನೆ ಮರೆತೆನು. ಕರಗಿ ಕೂತೆನು.
ನಿನ್ನ ಸಂಗದಿ ನನ್ನ ನಗುವಿದೆ
ನಿನ್ನ ಸಂಗದಿ ನನ್ನ ಬದುಕಿದೆ
ನಿನ್ನ ಸಂದಿಸಿ ಬದುಕು ಗೆದ್ದಿದೆ.
ಚುಕ್ಕಿ ತಾರೆಯ ನೀಲಿ ಬಾನಲಿ,
ಮಿಂಚಿ ಹೊಳೆಯುವ ಪೂರ್ಣ ಚಂದ್ರನು
ಕೊಂಚ ಶಪಿಸಿದ, ನಿನ್ನೆ ನೋಡಿದ
ಮೋಡದಡಿಯಲಿ ಮತ್ತೆ ಮುಳುಗಿದ.
ಹಚ್ಚ ಹಸುರಿನ ಬಸುರಿ ಇಳೆಯದು
ಮತ್ತೆ ಮಳೆಯೊಳು ಮಿಂದು, ಮುಳುಗಿ
ಅಂದ ಚೆಂದವ ಮಾಡಿ ,
ನಿಂಗೆ ಪಂಥವ ನೀಡಿ
ಸೋತು ನಾಚುತಲಿರಲು
ಗಳಿಗೆ ಗಂಡಾಂತರಕ್ಕೆ ಸಿಲುಕಿ
ಹಗಲನು ಹೆಗಲಿಗೆ ಹೊದಿಸಿ
ಗುಮ್ಮಗೆ ಕೂತು ನಿನ್ನನೆ ನೋಡಿದೆ.
ನಿನ್ನ ಬಣ್ಣಿಸದ ನಾಲಿಗೆ
ನಗೆಯ ನಿಲ್ಲಿಸಲಿ,
ನಿನ್ನ ನೋಡದ ಕಣ್ಣು
ಇಂಗಿ ಹೋಗಲಿ.
ಹೆಣ್ಣೇ..., ನೀ ಹೊನ್ನ ಖಜಾನೆ
ಜಡಿದ ಬೀಗವ ತೆಗೆದು
ಬಡಿಸು ಬಾ...
- ದಿಲೀಪ್ ಶೆಟ್ಟಿ.
super
ಪ್ರತ್ಯುತ್ತರಅಳಿಸಿyogish