ಎತ್ತ ಸಾಗಿದೆ ಸುತ್ತ ಮುತ್ತಲ ಲೋಕ
ನಿನ್ನ ನೋಡುತ ನಿಂತಿರೆ ,
ನಿನ್ನ ದನಿಯೊಳು ಮುಳುಗಿರೆ
ದುಂಡು ಭೂಮಿಯು ನಿಂತು ನಿನ್ನನೇ
ನೋಡುವಂತಿದೆ.
ನಬದ ನಯನ
ನಿನ್ನ ನೋಡುತ ನಿಂತಿರೆ ,
ನಿನ್ನ ದನಿಯೊಳು ಮುಳುಗಿರೆ
ದುಂಡು ಭೂಮಿಯು ನಿಂತು ನಿನ್ನನೇ
ನೋಡುವಂತಿದೆ.
ನಬದ ನಯನ
ನಗುವ ನಯನೆಯ ನೋಡಿ
ಕತ್ತಲಿಗೆ ಕೆನ್ನೆ ಕೊಟ್ಟು
ಮೋಡದಡಿಯಲಿ ನಾಚಿ
ನೀರಾಗಿ ಮಳೆಯ ಸುರಿಸುತಿರೆ
ನನ್ನೊಡತಿಯ ಮೇಲೆ
ಮುತ್ತ ಮೆತ್ತಂತಿದೆ.
ಗುಳಿ ಬಿದ್ದ ಕೆನ್ನೆಯ ನೋಡಿ
ಗಿಳಿವಿಂಡು ಗಳಿಗೆಗೆ ಗುಡುಗಿ
ಕಾಲವನು ಕೋಲಿಂದ ದೂಡಿರೆ
ಗಡಿಯಾರದ ಗಂಟೆ ಕತ್ತಲೆಡೆ
ಓಡಿದಂತಿದೆ.
ಚೆಲುವು ನಿನ್ನದು ಹೆಣ್ಣೇ,
ಹಾಳು ಮಾಡಿದೆ ನನ್ನೇ.
ನಗುವ ನಿನ್ನೊಲವಿ೦ಗೆ
ಕರಗಿ ಹೋಗಲೇ ಹಾಗೆ..
ಬೊಗಸೆಯಲಿ ಬಂದಿಸಿ ನನ್ನ
ಮೊಗೆದು ಬಿಡು ಹಾಗೆ...
-ದಿಲೀಪ್ ಶೆಟ್ಟಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ