ಗದ್ದೆ ದಡದಲಿ ನಿಂತು,
ಕೆರೆಯಲೀಜುವ ಮೀನಾ ಹಿಡಿಯಲು
ಹೊಂಚು ಹಾಕುತ ಕುಳ್ಳಿರೆ
ಮರೆತೇ ಬಿಟ್ಟೆವು ಜೀವ ಅವುಗಳ
ಇಲ್ಲವೇ ಹಕ್ಕು ಬದುಕಲು??
ಮನೆಯ ಮುಂದಿಹ ಕೋಳಿ ಮರಿಗಳ
ಕೊಟ್ಟು ಅಕ್ಕಿಯ ಸಾಕಿದೆ.
ನೆಂಟರಿಷ್ಟರು ಬಂದು ಕೂಡಿರೆ
ಕೊಂದು ತಿಂದೆವು ಕೇಳದೆ.
ಮರೆತೇ ಬಿಟ್ಟೆವು ಜೀವ ಅವುಗಳ
ಇಲ್ಲವೇ ಹಕ್ಕು ಬದುಕಲು??
ಜಗದ ಜೀವವೇ ಅಷ್ಟೇ ಕಾಣಿರಿ.
ಹುಲಿಯು ಕೊಲ್ವದು ಜಿಂಕೆಯ
ಇಲಿಯು ಸಾಯ್ವುದು ಬೆಕ್ಕಿಗೆ
ಮನುಜ ಸತ್ತವ ಆಹಾರವಾಗ್ವನು
ಸೂಕ್ಷ್ಮ ಜೀವಿಯ ಬಾಯಿಗೆ
ಮತ್ತೆ ಮಣ್ಣಲಿ ಸೇರಿ ಕೊಡುವನು
ಪೌಷ್ಟಿಕಾಮ್ಷತೆ ಗಿಡ ಮರ ಬೇರಿಗೆ.
ಜೀವ ಸರಪಣಿಯಲ್ ಅವನೇ ಬದುಕುವ
ಭಲಿಷ್ಟನೆನ್ನೋ ಪ್ರಾಣಿಯು.
ಇದು ದೇವನಾಟ, ಅಸ್ತಿತ್ವದಾಟ
ಜಗ ಜೀವದಾಟ, ಉಳಿವಿಗಾಗಿ ಹೋರಾಟ.
-ದಿಲೀಪ್ ಶೆಟ್ಟಿ.
(ಚಿತ್ರ ಕೃಪೆ: ಅಂತರ್ಜಾಲ)
Really Good and meaningfull buddy...
ಪ್ರತ್ಯುತ್ತರಅಳಿಸಿಅರ್ಥಪೂರ್ಣವಾದ ಕವಿತೆ ದಿಲೀಪ್.. ಈ ಜಗತ್ತಿನಲ್ಲಿ ಎಲ್ಲಾ ಜೀವರಾಶಿಗಳಿಗೂ ಬದುಕುವ ಹಕ್ಕಿದೆ ಎಂಬುದನ್ನು ಸಾಭೀತು ಪಡಿಸುವ ಪ್ರಯತ್ನದಂತಿದೆ ಕವಿತೆ, ಹಿಡಿಸಿತು..
ಪ್ರತ್ಯುತ್ತರಅಳಿಸಿ