ಹೆಬ್ಬಂಡೆಯ ಏರಿ,
ಹಬ್ಬಿದ ಅಹಂಕಾರದ ಅಹಂ
ಕಳಚಿ ಹಾಕಿ,
ಬೆತ್ತಲೆಯ ಬಾನೊಳಗೆ
ಬಚ್ಚಿಟ್ಟು,
ಚಿತ್ತ ಚಂಚಲೆಗೆ ಕಸಿ ಕೊಟ್ಟು,
ಅತಿಮಾನುಷದರ್ಶನದಿಂದೆದ್ದು
ಸತ್ವ ಸೊರಗಿದ ಸೊಕ್ಕಿನ ಹಿರಿ ಕಿಂಡಿಗಳ
ಪೊರೆ ಮುಚ್ಚಿ ,
ಮತ್ತೆ ಉಜ್ಜಿವಿಸಿ, ಉಜ್ವಲಿಸುವಾಸೆ.
ಅಭಿಭವದ ತೊಳಲಾಟಕ್ಕೆ
ಭಕ್ತಿ ಭ್ರುಮರವ ಹುಡುಕಿ
ಸಂತೃಪ್ತಿಯ ಮಧು ಹೀರುವ ಆಸೆ.
-ದಿಲೀಪ್ ಶೆಟ್ಟಿ
ಚಿತ್ರ ಕೃಪೆ: ಅಂತರ್ಜಾಲ
ver good Mr. Dileep Shetty... I enjoyed very much by reading your kavana... Radhakrishna Rao, LL.M. M. Phil(Law), ACS, Company Secretary, Bangalore 9343566016
ಪ್ರತ್ಯುತ್ತರಅಳಿಸಿthank you sir.
ಅಳಿಸಿ