ಕೊಳ್ಳುವರಿದ್ದರೆ ಕೇಳಿರಿ,
ನನ್ನೆದೆ ಸೇಲಿಗಿದೆ..
ಒಳ್ಳೆಯ ರೇಟಿಗೆ, ಸುಳ್ಳು ತೀಟೆಗೆ
ಮುರಿದ ಮನಸಿನ ದುಗುಡದೆಟಿಗೆ
ಭಗ್ನ ಪ್ರೀತಿಯ ಮರೆಯೋ ಮಾತಿಗೆ
ಮತ್ತೆ, ಕಲ್ಮಶ ಪ್ರೀತಿ ಭೇಟೆಗೆ..
ಕೊಳ್ಳುವರಿದ್ದರೆ ಕೇಳಿರಿ,
ನನ್ನೆದೆ ಸೇಲಿಗಿದೆ..
ಮುರಿದಿದೆ ಸ್ವಲ್ಪ , ಮರೆತಿದೆ ಅಲ್ಪ
ಸಿಗುವುದೆ ಜಗದಲಿ ಇಲ್ಲದೆ ಲೋಪ??
ಹಿಡಿ ಪ್ರೀತಿ, ಚಿಟಿಕೆ ಸಾಂತ್ವನ
ಎದೆಯ ಬಳ್ಳಿಗೆ ಅನುಕಂಪದ ಸಿಂಚನ,
ಇಷ್ಟೆ ಇದರ ನಿರ್ವಹಣಾ ದರ.
ಮೈಲಿಗೊಂದಿಷ್ಟು ಪ್ರೀತಿ
ಮೈಲೆಜಿಗಿಲ್ಲ ಪಚಿತಿ.
ಹತಾಶೆಯ ಕತ್ತಿಯಲಿ ಕೊಚ್ಚಿ,
ವೈಪಲ್ಯದ ಬಾಣಲೆಗೆ ನೂಕಿ,
ಬಲವಂತದ ಪ್ರೀತಿಯ ಮಳೆಯಲಿ ನೆನೆಸಿ
ಸುಮ್ಮನಿದ್ದು ಬಿಡುವುದು.
ನೀವಾಡಿಸಿದಂತೆ ಆಡುವುದು.
ಒಳ್ಳೆಯ ರೇಟಿಗೆ, ಸುಳ್ಳು ತೀಟೆಗೆ
ಕೊಳ್ಳುವರಿದ್ದರೆ ಕೇಳಿರಿ,
ನನ್ನೆದೆ ಸೇಲಿಗಿದೆ..
-ದಿಲೀಪ್ ಶೆಟ್ಟಿ
ಚಿತ್ರ ಕೃಪೆ : ಅಂತರ್ಜಾಲ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ