ನಾಗುವಕ್ಕನ
ಮನೆಗೆ ಏಗಳಿಕು ದೀಪಾವಳಿ ಹಬ್ಬಕ್ಕೆ ಪಟಾಕಿ ರಾಶಿ ಬಂದು ಉದರ್ತಿರತ್ತ್. ಬೆಂಗ್ಳೂರಿಂದ
ಉಮೇಶ-ಗಣೇಶ ಸಾಲುವೋ-ಸೂಲುವೋ ಮಾಡಿ, ಪಟಾಕಿ ಚೀಟಿ ಹಾಕಿ,
ಊರಿಗೆ ಒಂದ್ ಗೋಣಿಚೀಲ ಪಟಾಕಿ ಕಳಿಸ್ತಿದ್ದಿರ್. ಅದ್ರೆಗ್ ಅರ್ದಕ್ಕರ್ದ ಟುಸ್ಸ್ ಅಂತಿದ್ರೂ, ಉಳಿದ ಅರ್ದ ಗೋಣಿಚೀಲ ಒಳ್ಳೆ ಸೌಂಡ್ ಮಾಡ್ತಿದಿತ್. ಆ ಪಟಾಕಿ ಶಬ್ದದಲ್ಲೇ
ಗೊತ್ತಾತಿದಿತ್, ಇದು ತೆಕ್ಕಟ್ಟೆ ಸಾಯಿಬ್ರ ಅಂಗಡಿ ಪಟಾಕಿಯೂ ಅಲ್ಲ, ಕೋಟ ಮಾಸ್ಟರ್ ಶೊಪ್ ಅಂಗಡಿ ಪಟಕಿಯೂ ಅಲ್ಲ, ಇದು ಗ್ಯಾರಂಟೀ
ಬೆಂಗ್ಳೂರ್ ಪಟಾಕೀಯೆ ಅಂದೇಳಿ. ನಮ್ಮನಿ ಕತಿಯೆ ಬೇರೆ. ಎಲ್ಲರೂ ದೀಪಾವಳಿ ದಿನವೇ ತುಳಸಿ ಪೂಜಾ
ಇಟ್ಕಂಡ್ರೆ, ನಮ್ಮನೆಗೆ ಆ ಟೈಮೆಗೆ ತುಳಸಿ ಪೂಜೆ ಮಾಡ್ತೀರ್ಲಿಲ್ಲ, ಅದರ ಬದಲಾಯಿ ನಾವು ನವರಾತ್ರಿ ಶುರುವಿಗೆ ವಸಂತ ಮಾಡ್ತಿದಿತ್. ಇದೆ ನೆಪ ಸಾಕಿದಿತ್
ನಮ್ಮ ಅಜ್ಜಯ್ಯಂಗೆ. “ತುಳಸಿ ಪೂಜಾ ಇಲ್ಲ ಎಂತ ಇಲ್ಲ, ಪಟಾಕಿ ಯಂತಕೆ
ಗಡಾ ನಿಂಗೆ?. ಹೊಗ್ ಹೊಗ್ ತೆವಡ್ಸಕೋ.” ಅಂತಿದಿರ್. ನಾವು ಬಿಡತ್ತಾ, ಸ್ವಲ್ಪ over-acting ಮಾಡಿ,
ಮರ್ಕದರ್ ಕಂಡೆಗ್ ಮಾಡಿ ಒಂದ್ 50 ರುಪಾಯಿ ಪಟಾಕಿಯಾದ್ರೂ ವ್ಯವಸ್ಥೆ ಮಾಡ್ಕಂತಿದಿತ್. ಇನ್ನೂ
ಯಾರಾದ್ರೂ ಹಬ್ಬಕ್ಕೆ ಅಂದೇಳಿ ಮನಿಗೆ ಬಂದ್ರೆ, 200 ರೂಪಾಯಿ ಪಟಾಕಿಗೆ
ಏನೂ ಕಮ್ಮಿ ಇಲ್ಲ.
ಅಂತೂ
ಪಟಾಕಿಗೆ ಒಂದ್ ಹಜಿ ಹಾಕಿ ಆರ್ ಮೇಲೆ, ಸಾಯಂಕಾಲ ಆಪೂದ್ರೊಳ್ಗೆ ಬೂದ್ ನೀರ್ ಹರಿಗೆ ಜಲ್ಲಿ
ಹೂ ತಕಂಡ್ ಬರ್ದಿರೆ ಮತ್ತೆ ಅಜ್ಜಯ್ಯನ ಕೆಂಗಣ್ಣಿಗೆ ಗುರಿ ಅಯ್ಕಾತ್ತ್ ಅಂದೇಳಿ ಮದ್ಯಾನ
ಗುಡ್ಡೆಗೆ ಆಡಿ ಸುಸ್ತಾದ ಕೂಡ್ಲೆ ಎಲ್ಲ ಒಂದ್ meeting ಮಾಡ್ತ್. ಜೆಲ್ಲಿ
ಹೂ ಬೇಕು, ಕಡೆಕ್ ನಾಳಿಗೆ ಬಲಿ ಪೂಜಕ್ಕೆ ಜೆಲ್ಲಿ ಎಲಿಯೂ ಬೇಕು. “ಹ್ವಾ, ಚಪ್ಪನ್ ಕೆರೆಗೆ ಹ್ವಾಪ ಮರೆ, ಹೋದ ವರ್ಷ ಅಲ್ಲಿಂದನೇ
ಅಲ್ದನಾ ನಾವು ತಕಂಡ್ ಬಂದದ್ದ್” ಅಂದ ದ್ರುವ್ವೆಶ. “ಆ ಕೆರಿ ಬತ್ತಿ ಹೊಯಿ ಎಷ್ಟ್ ದಿನ ಆಯ್ತ್
ಮರೆ. ಚಾಬ್ಲ್ ಎಲ್ಲ ಎತ್ತಿ ಹಾಕಿ ನಾಕ್ ಮುಯಿಡ, ಶಿಲೋಪಿ ಹಿಡಿಲ್ಯನ
ಹೋದ ತಿಂಗಳು.. “ ಅಂದ ಹೊಟ್ಟಿ ಗಣೇಶ. “ನಾವು ಹೀಂಗೆ ಮಲ್ಯಾಡಿ ಬದಿಗೆ
ಹ್ವಾಪ ಮರೆ, ಅಲ್ಲಿ ಸುಮಾರ್ ಕ್ವಜಿ ಹ್ವಂಡ ಇತ್ತ್. ಹಾಂಗೆ ಲೈಕ್ ಮಾಡಿ
ಮಿಂದುಕಂಡು, ಜೆಲ್ಲಿ ಹೂ, ಜೆಲ್ಲಿ ಎಲೆ ಎಲ್ಲ
ತ ಕಂಡ್ ಬಪ್ಪುವ ಮರೆ..” ಅಂದೇಳಿ ಪ್ರವೀಣ ಹೇಳ್ರ್ ಕೂಡ್ಲೆ, ಸುಜನ್ನ
ಗಂಡಿನ “ಮನಿಗೆ ಹೊಯಿ ಒಂದ್ ಟವಲ್ ತಕಂಡ್ ಬಾ, ಹಾಂಗೆ ಜೆಲ್ಲಿ ಹೂ
ತಪ್ಪುಕ್ ಹ್ವಾತಿತ್ತ್ ಅಂದೇಳಿ ಅಜ್ಜಯ್ಯಂಗೆ ಹೇಳು” ಅಂದೆಳಿ ದೊಡ್ಡ್ ಜಾಪೆಗೆ ಕಳ್ಸಿ ಕೊಟ್ಟಿ.
ನಾವು ಇಲ್ದೇ ಇದ್ರೆ ಮನೆಯವರು ಎಷ್ಟ್ ಕಷ್ಟ ಪಡ್ಕಿದಿತ್ ಕಾಣ್ ಅನ್ನೋ ಶೂಂಟಿ ಎಲ್ಲರ ಮುಖದೆಗೆ ಪಳಗುಟ್ಟತ್ತಾ
ಇದಿತ್.
ಎಂಟು
ಹತ್ತು ಜನರ battalion ದಿವಾಳಿ ಹಬ್ಬದ ಪೂರ್ವ ತಯಾರಿಯಲ್ಲಿ ಇಷ್ಟೊಂದ್ involve ಆತಿದ್ರ್ ಅಂದ್ರೆ ಮನಿಯವರಿಗೆ ಇನ್ನ್ ಎಂತ ಬೇಕ್ ಅಲ್ದೆ?
ಅಂದೇಳಿ ಮನಸಿನಲ್ಲೆ ದೊಡ್ಡ್ ಲಾಡ್ ಕಂಡೆಗೆ ಯಾಸ ಮಾಡ್ತಾ, “ನಮ್ಮನೆಗೆ
ಇಷ್ಟಪ ಪಟಾಕಿ ತಂದಿರ್”, “ನಮ್ಮನೆಗೆ ಅಣ್ಣ ಬತ್ತಿ ಅಂದವ್ನ್ ಇನ್ನೂ
ಬರ್ಲಿಲ್ಲ ಮರೆ”, “ನಮ್ಮನೆಗೆ ಬಿಡಿ ಪಟಾಕಿ ಮಾತ್ರ ತಕಂಡ್ ಬಂದಿರ್”, “ನಾನ್ ಈ ಸಲ ಮೂಕಕ್ಕನ ಮನಿ ತುಳಸಿ ಪೂಜಕ್ಕೆ ಹ್ವಾತಿ ಮರೆ,
ನಮ್ಮನೆಗೆ ಸೂತಕ ಅಂಬರು” ಹೀಂಗೆ ಬೇಕಾದ್ದ್ ಬ್ಯಾಡದೆ ಇದ್ದದ್ದ್ ಮಾತಾಡ್ಕಂತ ಕೊಜಿ ಹೊಂಡ ಹುಡ್ಕತ
ಹೊರಡ್ತ್. “ಸುಕೇತಣ್ಣ ಸುಕೇತಣ್ಣ ನಿಮ್ಮನೆಗೆ ಬಾಬಣ್ಣ ಜೆಲ್ಲಿ ಹೂ,
ಎಲಿ ಎಲ್ಲ ತಕಂಡ್ ಬಂದಿರ್ ಅಂಬ್ರ್. ನೀವ್ ತಪ್ಪುದ್ ಬ್ಯಾಡ ಅಂಬ್ರ್ ..” ಅಂದೆಳಿ ಒಂದೇ ಉಸ್ರೆಗ್
ಓಡಿ ಬಂದು ಹೆಳ್ದ ಸುಜನ. ಇವ್ನಿಗೂ ಅದೇ ಬೇಕಿದಿತ್ ಅಂದೆಳಿ ಮಾಡ್ವ. ಕೂಡ್ಲೆ ಎಲ್ಲ ಸುಕೇತನ ಹತ್ರ
ಹೊಯಿ, “ಸುಕೇತ, ನಂಗ್ ಸ್ವಲ್ಪ help ಮಾಡ್ ಮಾರಾಯ, ಕಡಿಕೆ ಶುಂಠಿ ಸೋಡಾ ಕೊಡಸ್ತೆ, ಬಾಜಲ್ ಕೊಡಸ್ತೆ, ಜಯರಾಮಣ್ಣನ ಅಂಗಡೆಗೆ ಪಪ್ಸ್ ತೆಗ್ಸಿ
ಕೊಡ್ತೆ“ ಅಂದೆಳಿ ಹತ್ತು ಹಲವು ಆಸೆ ತೊರ್ಸುಕೆ ಶುರು ಮಾಡಿದ್ರು. “ಆಯ್ತ್ ಆಯ್ತ್ ಎಲ್ಲರಿಗೂ ತೆಗ್ದ್
ಕೊಡ್ತಿ, ನಿಮ್ಮ್ ಹರ್ಮಯ್ಕು ನಿಲ್ಲಿಸಿ. ಮೊನ್ನೆ 10 ರುಪಾಯಿ ಬೆಟ್ಟ್
ಗೆದ್ದದ್ದ್ ಮೊದ್ಲು ಕೊಟ್ಟು ಸಾಯ್ನಿಯ” ಅಂದೆಳಿ ಸುಕೇತ ಬುಸ್ಗುಟ್ಟುಕ್ ಶುರು ಮಾಡುಕು ಎಲ್ಲ ಬಾಯಿ ಮುಚ್ಕಂಡ್ ಜೆಲ್ಲಿ ಹೂ
ಹುಡ್ಕುಕ್ ಶುರು ಮಾಡ್ರ್.
ಅಂತೂ
ಇಂತೂ ಎಲ್ಲರ್ ಮನಿಗೆ ಬೇಕಾಪುವಷ್ಟು ಜೆಲ್ಲಿ ಹೂಗು, ಜೆಲ್ಲಿ ಎಲೆ ತಕಂಡ್,
ಕೊಜಿ ಹೊಂಡದಲ್ಲಿ ಹೊಡ್ಕಿ, ಮನಿ ಬದಿಗೆ ಬಂತು. ಜೆಲ್ಲಿ ಎಲೆ, ಜೆಲ್ಲಿ ಹೂವನ್ನು ಹುರಿ ಬಳ್ಳೆಗೆ ಕಟ್ಟಿ, ಬಾವಿ ಒಳಗೆ
ಬಾಡದೆ ಇರಲಿ ಅಂದೆಳಿ ಇಳ್ಸಿಯೂ ಆಯ್ತು. ಒಂದು ಜೆಲ್ಲಿ ಹೂವನ್ನು ಮುರ್ದು ಒಂದು ಜೆಲ್ಲಿ ಹಾರನೂ ready ಮಾಡಿ ಆಯ್ತು. ಸಾಯಂಕಾಲ ಆದ ಕೂಡ್ಲೆ, ಬೂಧ್ ನೀರ್ ತುಂಬಿಸುವ
ಕೆಲಸ. ಮಸಿ ಹಿಡದ್ದ್ ಮೀಯುವ ಹರಿನ ಅಮ್ಮ ಸಮಾ ಮಾಡಿ ತಿಕ್ಕಿ ಬೆಳ್ಳಗ್ ಮಾಡಿಟ್ಟಿದ್ದಳ್ಳ್.
ಮದ್ಮಗ್ಳ ಕಂಡೆಗೆ ನಮ್ಮನಿ ಹರಿ ನಾಚ್ಕಂತಿಪ್ಪತಿಗೆ, ಅದರ ಮೈ ಮೇಲೆಲ್ಲಾ
ಶೇಡಿ ರಂಗೋಲಿ ಹಾಕಿ, ಕುಂಕುಮದ ಬಟ್ಟು ಇಟ್ಟು, ಜೆಲ್ಲಿ ಹೂವನ್ನ ಮೀವರಿ ಕೊರಳಿಗೆ ಹಾಕಿ ಸಿಂಗಾರ ಮಾಡ್ದಳ್. ಹರಿ ಚಂದ ಗ್ವಾಂಪಿ
ಆಯ್ತ್. ಅಂತೂ ಇಂತೂ ಮೀವರಿಗೂ ವರ್ಷಕ್ಕೊಂದ್ ಸ್ನಾನ ಆದಂಗೆ ಆಯ್ತ್ ಅನ್ನಿ. ಇದಾದ ಮೇಲೆ main ಪ್ರೊಗ್ರಾಮ್. ಹರಿಗೆ ನೀರು ತುಂಬುದು. ಅಕ್ಕ ಮತ್ತೆ ಅಮ್ಮ ಬಾಮಿಯಿಂದ ನೀರ್ ಎತ್ತಿ
ಹರಿಗೆ ತುಂಬ್ಸುಕೆ ಶುರು ಮಾಡಿದ್ರು. ನಾನು ಅವರ ಹಿಂದೆ ಜಾಗಟೆ ಬಾರಿಸ್ತಾ ಅವರನ್ನೇ follow ಮಾಡಿದೆ. ಅಂತೂ ಹರಿ ತುಂಬಿತು. ಹರಿಗೆ ಕಿಚ್ಚ್ ಹಾಕಿ ನೀರು ಕಾಯುಕೆ ಶುರು ಆಯ್ತು.
ಇನ್ನೆನಿದ್ರೂ ಬೆಳಿಗ್ಗೆ ಎಣ್ಣೆ ಹಚ್ಕಂಡ್, ಬೂಧ್ ನೀರ್ ಸ್ನಾನ
ಮಾಡಿದ್ರೆ ಆಯ್ತ್. ಬೆಳಿಗ್ಗೆ ಬೇಗೆ ಅಜ್ಜಯ್ಯನ ಓಲಗ ಶುರುವಾದ ಕೂಡ್ಲೆ ಕಣ್ಣು ಉಜ್ಕಂಡು ಎದ್ದು, ಎಣ್ಣೆ ಮೈ ತುಂಬಾ ಹಚ್ಕಂಡು, ಬೂಧ್ ನೀರು ಸ್ನಾನ ಮಾಡ್ಕಂಡು
ಮೆಂತೆ ಕಡುಬು ಮುಕ್ಕುಕೆ ಶುರು ಮಾಡ್ವತಿಗೆ “ಗಡಾ, ಬಲಿ ಪೂಜಕ್ಕೆ ನೆಣಿ
ಕೋಲ್ ಮಾಡಿ ಇಡ್ಕ್, ಬೇಗೆ ಬಾ ಆಡ್ಕಂಡ್..” ಅಂದ್ರು ಅಜ್ಜಯ್ಯ. ಬಲಿ
ಕರುಕ್ ಹ್ವಾದ್ದ್ ಕಥೆನ ಇನ್ನೊಂದ್ ಸಲ ಸಿಕ್ಕತ್ರಿಯಲ್ಲೇ ಮಾತಾಡುವ ಆಗ್ದಾ?.
-ದಿಲೀಪ್ ಶೆಟ್ಟಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ