ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಪ್ರೀತಿ.. ಅನಂತ(ರ ).. love.. after.. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪ್ರೀತಿ.. ಅನಂತ(ರ ).. love.. after.. ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಫೆಬ್ರವರಿ 10, 2012

ಪ್ರೀತಿ.. ಅನಂತ(ರ )..


ಗಳಿಗೆಗೊಂಬತ್ತು ಪದ,
ಮತ್ತೆ ನಗುವಿನ ಮೊಗ, 
ಅರೆ ಗಳಿಗೆ ಮೌನವ ಒಡ್ಡಿ 
ಕಣ್ಣ ಕೆಂಪಗೆ ಮಾಡಿ
ತಟ್ಟಿ ಆಡುವ ಸೊಗ.

ಬಟ್ಟ ಬಯಲಿನ ಸುತ್ತ 
ಅವಳ ನೆನಪಿನ ಚಿತ್ತ.
ಒಂಟಿ ನೆಪ, ಜಂಟಿಯಾಗುವ ಜಪ.

ಕುಣಿವ ನವಿಲು, ಕೂಗೊ ಕಾಗೆ
ಆಗೊಮ್ಮೆ ಈಗೊಮ್ಮೆ ಜ್ವಲಿಸೊ ರವಿ 
ಕಲ್ಬಂಡೆಯ ಮೇಲ್ ಕೆತ್ತಿದ ಪದ,
ನೆನಪಿನಂಬುದಿಯ ಕದಡುತಿದೆ.
ಕಣ್ಣ ಇಬ್ಬನಿಯು ಕರಗುತಿದೆ.

ಇಂದಿಗಿಪ್ಪತ್ತು ಮಾಸ
ಒಲವು ಸಮಾದಿಯ ವಾಸ.
ನಿನ್ನ ನೆನಪಿನ ಪಟ
ಸೂತ್ರ ಕಿತ್ತ ಗಾಳಿಪಟ.
ಭರವಸೆಯ ಬಿರುಗಾಳಿಗೆ 
ಮತ್ತೆ  ಧೂಳಿಪಟ.
ವರ್ತಮಾನದ ಪುಟದಿ 
ಮತ್ತೆ ನೋವಿನ ಪಾಠ.

-ದಿಲೀಪ್ ಶೆಟ್ಟಿ.

ಚಿತ್ರ ಕೃಪೆ: ಅಂತರ್ಜಾಲ