ಗಳಿಗೆಗೊಂಬತ್ತು ಪದ,
ಮತ್ತೆ ನಗುವಿನ ಮೊಗ,
ಅರೆ ಗಳಿಗೆ ಮೌನವ ಒಡ್ಡಿ
ಕಣ್ಣ ಕೆಂಪಗೆ ಮಾಡಿ
ತಟ್ಟಿ ಆಡುವ ಸೊಗ.
ಬಟ್ಟ ಬಯಲಿನ ಸುತ್ತ
ಅವಳ ನೆನಪಿನ ಚಿತ್ತ.
ಒಂಟಿ ನೆಪ, ಜಂಟಿಯಾಗುವ ಜಪ.
ಕುಣಿವ ನವಿಲು, ಕೂಗೊ ಕಾಗೆ
ಆಗೊಮ್ಮೆ ಈಗೊಮ್ಮೆ ಜ್ವಲಿಸೊ ರವಿ
ಕಲ್ಬಂಡೆಯ ಮೇಲ್ ಕೆತ್ತಿದ ಪದ,
ನೆನಪಿನಂಬುದಿಯ ಕದಡುತಿದೆ.
ಕಣ್ಣ ಇಬ್ಬನಿಯು ಕರಗುತಿದೆ.
ಇಂದಿಗಿಪ್ಪತ್ತು ಮಾಸ
ಒಲವು ಸಮಾದಿಯ ವಾಸ.
ನಿನ್ನ ನೆನಪಿನ ಪಟ
ಸೂತ್ರ ಕಿತ್ತ ಗಾಳಿಪಟ.
ಭರವಸೆಯ ಬಿರುಗಾಳಿಗೆ
ಮತ್ತೆ ಧೂಳಿಪಟ.
ವರ್ತಮಾನದ ಪುಟದಿ
ಮತ್ತೆ ನೋವಿನ ಪಾಠ.
-ದಿಲೀಪ್ ಶೆಟ್ಟಿ.
ಚಿತ್ರ ಕೃಪೆ: ಅಂತರ್ಜಾಲ
ಭಾವಗೀತೆಯ ಲಕ್ಷಣವಿರುವ ರಚನೆ.
ಪ್ರತ್ಯುತ್ತರಅಳಿಸಿ"ಇಂದಿಗಿಪ್ಪತ್ತು ಮಾಸ
ಒಲವು ಸಮಾದಿಯ ವಾಸ."
ಆಳಾರ್ಥ ಚಿಂತಾಮಣಿ ಸಾಲುಗಳು.
ಘಟನೆಗಳೇ ಹಾಗೆ...
ಪ್ರತ್ಯುತ್ತರಅಳಿಸಿಘಟಿಸುವಾಗ ಏನೋ ಒಂಥರಾ....
ಗತಿಸಿದ ನಂತರ,, ಬರೀ ಮಾಸದ ನೆನಪುಗಳು...
ತುಂಬಾ ಚೆಂದ ಬರೆಯುತ್ತೀರಿ. ನಿಮ್ಮ ಶ್ರಮ, ತಾಳ್ಮೆ,ಪದಗಳ ಒಗ್ಗೂಡಿಸುವಿಕೆ ಈ ಕವಿತೆಯಲ್ಲಿ ಎದ್ದು ಕಾಣುತ್ತಿದೆ.ಇನ್ನಷ್ಟು ಬರೆಯಿರಿ. ಶುಭವಾಗಲಿ.
ಪ್ರತ್ಯುತ್ತರಅಳಿಸಿಮನ ನೋವಿನ ಒಡಲೇ ಕವಿತೆಯಾಗಿದೆ ಇಲ್ಲಿ.. ಮನಮುಟ್ಟುವಂತಹ ಪದಗಳ ಪೋಣಿಸಿ, ಪ್ರೀತಿಯ ಹತಾಶೆಯ ಭಾವವಾಗಿ ಬೆರೆಸಿ ತೀವ್ರವಾದ ಭಾವಸ್ರಾವವಾಗುವಂತೆ ಮಾಡಿದೆ ಕವಿತೆ.. ಭಾವಾಭಿವ್ಯಕ್ತಿ ಮನಸ್ಸಿನಾಳಕ್ಕೆ ನುಗ್ಗುತ್ತದೆ ನಿಮ್ಮ ಕವಿತೆಯೊಂದಿಗೆ..
ಪ್ರತ್ಯುತ್ತರಅಳಿಸಿ